ಮುಲ್ಕಿ ಡ್ರಗ್ಸ್ ಮಾಫಿಯಾ ವಿರುದ್ದ ನಡೆದ ಸಾರ್ವಜನಿಕ ಕಾರ್ಯಕ್ರಮ

Bhagyavan Sanil
ಮೂಲ್ಕಿ: ವಿಶ್ವಕ್ಕೆ ಶಾಂತಿ ಮತ್ತು ನೈತಿಕತೆಯನ್ನು ಭೋದಿಸುತ್ತಾ ಬಂದಿರುವ ಹಿಂದೂ ಧರ್ಮವು ಕಪಟ ರಾಜಕಾರಣಿಗಳು ಮತ್ತು ಕುಟಿಲ ಮತಾಂತರಿಗಳಿಂದ ನಡೆಯುವ ಡ್ರಗ್ಸ್ ಮಾಫಿಯಾ ಹುನ್ನಾರದ ವಿರುದ್ದ ಹಿಂದೂ ಸಮುದಾಯ ಸಂಘಟಿತರಾಗಿ ತಮ್ಮ ಯುವ ಪೀಳಿಗೆಯನ್ನು ಮತ್ತು ಧರ್ಮವನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ ಎಂದು ಕೇರಳದ ಹಿಂದೂ ಐಖ್ಯ ವೇದಿಕೆಯ ರಾಜ್ಯ ಉಪಾಧ್ಯಕ್ಷ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು.
ಹಿಂದೂ ಜಾಗರಣ ವೇದಿಕೆ ಹಳೆಯಂಗಡಿ ಮಂಡಲದ ಆಶ್ರಯದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ದ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸನಾತನ ಹಿಂದೂ ಧರ್ಮವು ಬಲವಾದ ಆದ್ಯಾತ್ಮಿಕ ನೆಲೆಯನ್ನು ಹೊಂದಿರುವ ಪರಿಣಾಮ ಕುಟಿಲ ಮತಾಂತರಿಗಳು ಯುವ ಪೀಳಿಗೆಯನ್ನು ಗುರಿಯಾಗಿಸಿ ಅವರನ್ನು ಡ್ರಗ್ಸ್ ಜಾಲದಲ್ಲಿ ಬೀಳಿಸಿ ನೈತಿಕ ಅಧಃಪತನಕ್ಕಿಳಿಯುವಂತೆ ಮಾಡುತ್ತಾರೆ ಮಾತ್ರವಲ್ಲ ಲವ್ ಜಿಹಾದ್ ಮುಂತಾದ ಹೆಸರಿನಲ್ಲಿ ಮುಗ್ಧ ಹಿಂದೂ ಹುಡುಗಿಯರನ್ನು ಅಪಹರಿಸುವ ಕೆಲಸಮಾಡುತ್ತಿದ್ದಾರೆ. ನಮ್ಮ ಸರ್ಕಾರ ಮತ್ತು ಪೋಲೀಸು ಇಲಾಖೆ ಕ್ರತ್ಯದ ವಿರುದ್ಧ ಹೋರಾಡುವ ಯುವಕರ ವಿರುದ್ದ ಗೂಬೆ ಕೂರಿಸುವ ಕಾರ್ಯ ಮಾಡುತ್ತಿರುವುದು ಖಂಡನೀಯವಾಗಿದೆ ಈ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕು ಮತ್ತು ಸರ್ಕಾರ ಮತ್ತು ಪೋಲೀಸ್ ಇಲಾಖೆಯನ್ನು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದರು.
ಸ್ಥಳೀಯ ಮುಖಂಡ ಕೊಳುವೈಲು ಸತೀಶ್ ಭಟ್ ಮಾತನಾಡಿ ಯುವ ಪೀಳಿಗೆಯನ್ನು ಕೆಡಿಸಲು ಡ್ರಗ್ಸ್ ಮಾಫಿಯಾದ ಕೃತ್ಯಕ್ಕೆ ತಡೆಯಾಗಿ ಗ್ರಾಮ ಮಟ್ಟದಲ್ಲಿ ಡ್ರಗ್ಸ್ ವಿರುದ್ದ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಹಿಂದೂ ಜಾಗರಣ ವೇದಿಕೆಯ ಸುರತ್ಕಲ್ ಮಂಡಲದ ಸಂಚಾಲಕ ಸತೀಶ್ ಮುಂಚೂರು, ಹಳೆಯಂಗಡಿ ಮಂಡಲದ ಅಧ್ಯಕ್ಷ ಸನತ್ ಕುಮಾರ್, ಪ್ರದೇಶದ ಹಿರಿಯರಾದ ಮೋಹನ್ ಸುವರ್ಣ ಉಪಸ್ಥಿತರಿದ್ದರು.
ನಿಧಿ ಪ್ರಮುಖ ಹರೀಶ್ ಡಿ.ಎಸ್ ಸ್ವಾಗತಿಸಿದರು, ರಾಮಚಂದ್ರ ಶೆಣೈ ನಿರೂಪಿಸಿದರು, ತೂಕಾರಾಂ ವಂದಿಸಿದರು.

Kinnigoli-18021303

Comments

comments

Leave a Reply

Read previous post:
ಕಟೀಲು-ತಿಂಗಳ ಚಿಂತನ ಕಾರ್ಯಕ್ರಮ

Mithun Kodethur ಕಟೀಲು : ಆಸೆ ಸಹಜ. ಆಸೆ ಪೂರೈಸಲು ಸಂಪತ್ತು ಬೇಕು. ಆದರೆ ಅದು ಧರ್ಮದ ಮಾರ್ಗದಲ್ಲಿ ಬರಬೇಕು ಎಂದು ಬೆಳ್ತಂಗಡಿಯ ವಕೀಲರಾದ ಪ್ರತಾಪಸಿಂಹ ನಾಯಕ್...

Close