ಅಂತರ ಕಾಲೇಜು ಪ್ರತಿಭಾ ಸ್ಪರ್ಧೆ ವಿಜಯ ಕಲಾ ಸಂಗಮ 2013

Bhagyavan Sanil

ಮೂಲ್ಕಿ: ಶಿಕ್ಷಣ ಪದ್ದತಿಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಕೊರತೆಯನ್ನು ಕಾಣುತ್ತಿರುವುದರಿಂದ ಅಮುಲಾಗ್ರ ಬದಲಾವಣೆಯನ್ನು ಸರಕಾರ ನಿರೀಕ್ಷಿಸುತ್ತಿದ್ದು ಹಿರಿಯರ ಅನುಭವ ಮತ್ತು ಕಿರಿಯರ ಆಕಾಂಕ್ಷೆಗಳನ್ನು ಕ್ರೋಡಿಕರಿಸಿ ಸಮಗ್ರ ಅದ್ಯಯನ ನಡೆಸಿ ಬಳಿಕ ಬದಲಾವಣೆ ತರಬಹುದಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಗುರುವಾರ ಮೂಲ್ಕಿ ವಿಜಯಾ ಕಾಲೇಜಿನ ಸುವರ್ಣ ಮಹೋತ್ಸವ ವರ್ಷ ಕಾರ್ಯಕ್ರಮದ ಪ್ರಯುಕ್ತ ಅಂತರ ಕಾಲೇಜು ಪ್ರತಿಭಾ ಸ್ಪರ್ಧೆ ವಿಜಯ ಕಲಾ ಸಂಗಮ 2013 ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಗ್ರಾಮೀಣ ಬಡ ವರ್ಗದ ವಿದ್ಯಾರ್ಥಿಗಳ ಪದವಿ ಶಿಕ್ಷಣದ ಕನಸನ್ನು ಸಾಕಾರ ಗೊಳಿಸಲು ಕಳೆದ 5 ವರ್ಷಗಳಲ್ಲಿ 356 ಪದವಿ ಕಾಲೇಜುಗಳನ್ನು ಪ್ರಾರಂಭಿಸಿದ್ದು ಮಾತ್ರವಲ್ಲದೆ ಈ ಬಾರಿನ ಬಜೆಟ್‌ನಲ್ಲಿ ಶಿಕ್ಷಣಕ್ಕೆ ೧೮ಸಾವಿರದ 666 ಕೋಟಿರೂ ಅನುದಾನ ಪ್ರಕಟಿಸಿ ದೇಶದಲ್ಲಿ ಉತ್ತಮ ಸ್ಥಾನಗಳಿಸಿದೆ ಎಂದರು
ಖಾಸಗೀ ವಿಶ್ವ ವಿದ್ಯಾನಿಲಯಗಳಲ್ಲಿ ಶೇ40 ಸೀಟುಗಳ ಮೀಸಲನ್ನು ರೋಸ್ಟರ್ ಪದ್ದತಿಯ ಅನುಸಾರ ಸರ್ಕಾರ ಕಡು ಬಡವರ ಮಕ್ಕಳಿಗೆ ನೀಡುವ ಮೂಲಕ ಆರ್ಥಿಕ ದುರ್ಬಲರ ಮಕ್ಕಳ ಉನ್ನತ ಶಿಕ್ಷಣ ಆಕಾಂಕ್ಷೆಗಳನ್ನು ಪೂರೈಸುತ್ತಿದೆ. ದೈವ ದೇವರುಗಳ ಹೆಸರಿನಲ್ಲಿ ಮುಗ್ದರ ಶೋಷಣೆ ನಡೆಸುವ ದುಷ್ಕರ್ಮಿಗಳ ವಿರುದ್ದ ಸರ್ಕಾರದಿಂದ ಕಣ್ಗಾವಲು ಇರಿಸುವ ಪ್ರಕ್ರಿಯೆಗೆ ಅಧ್ಯಯನಕ್ಕಾಗಿ ಪಂಚ ಸದಸ್ಯ ಸಮಿತಿಯನ್ನು ನೇಮಿಸಲಾಗಿದ್ದು ಅವರ ಅಧ್ಯಯನ ಮಾಹಿತಿಯನ್ನು ಪಡೆದು ಶೀಘ್ರ ನಿರ್ಣಯಕ್ಕೆ ಬರಲಾಗುವುದು ಎಂದರು.

Mulki-21021301

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮಾತನಾಡಿ, ಪ್ರಪಂಚಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರದ ಬೆಳಕನ್ನು ನೀಡಿದ ಭಾರತದ ಪ್ರಜೆಗಳಾಗಿ ನಮ್ಮ ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೇರಿಸುವ ಹೊಣೆ ನಮ್ಮದಾಗಿದೆ. ಜಿಲ್ಲೆಯ ಕರಾವಳಿಯ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರವು ಅಧಿಕವಾಗಿರುವ ನಿಟ್ಟಿನಲ್ಲಿ ಶೀಘ್ರದಲ್ಲಿ ವಿದ್ಯಾರ್ಥಿ ಸಮ್ಮೇಳನ ನಡೆಸಿ ಮಾಹಿತಿ ಪಡೆಯಲಾಗುವುದು ಎಂದರು.
ಅತಿಥಿಗಳಾಗಿ ಹಳೆಯಂಗಡಿ ಉದ್ಯಮಿ ಎಸ್.ಎಸ್. ಸತೀಶ್ ಭಟ್, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಕಸ್ತೂರಿ ಪಂಜ, ಮೂಲ್ಕಿ ನ.ಪಂ.ಸದಸ್ಯ ಸುನೀಲ್ ಆಳ್ವಾ,ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ನಾರಾಯಣ,ವಿಜಯ ಕಲಾ ಸಂಗಮ ಸಮಿತಿಯ ಅಧ್ಯಕ್ಷ ದೇವ ಪ್ರಸಾದ್ ಪುನರೂರು,ಕಾರ್ಯದರ್ಶಿ ಪ್ರೊ.ಎಂ.ಚೆನ್ನ ಪೂಜಾರಿ,ವಿದ್ಯಾರ್ಥಿನಾಯಕ ಅಮಿತ್ ಪೈ,ಲಲಿತ ಕಲಾ ಸಂಘದ ಕಾರ್ಯದರ್ಶಿ ದುರ್ಗಾಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರೊ.ಕೆ.ಆರ್ ಶಂಕರ್ ಸ್ವಾಗತಿಸಿದರು,ದುರ್ಗಾಗಣೇಶ್  ಕೆವಿ ಪ್ರಾರ್ಥಿಸಿದರು.ಪ್ರಾಣೇಶ್ ಭಟ್ ದೇಂದಡ್ಕ ಮತ್ತು ಪ್ರೊ.ಹಯವದನ ಉಪಾಧ್ಯ ನಿರೂಪಿಸಿದರು.ಅಮಿತ್ ಪೈ ವಂದಿಸಿದರು. ಕಾರ್ಯಕ್ರಮದ ಮೊದಲು ಚೆಂಡೆ ಕಹಳೆ ವಿವಿಧ ವಾದ್ಯಗೋಷ್ಠಿಯೊಂದಿಗೆ ವಿವಿಧ ಯಕ್ಷಗಾನ ವೇಷ ಭೂಷಣ ಸಹಿತ ಅತಿಥಿಗಳು ಮತ್ತು ವಿದ್ಯಾರ್ಥಿಗಳ ಮೆರವಣಿಗೆ ನಡೆಸಲಾಯಿತು.

Comments

comments

Leave a Reply

Read previous post:
ಹಮೀದ್ ಹಾಜಿಗೆ-2011-12ನೇ ಸಾಲಿನ “ಕೃಷಿ ಪ್ರಶಸ್ತಿ”

ಕಿನ್ನಿಗೋಳಿ: ಮುಂಗಾರು ಹಂಗಾಮಿನ ಭತ್ತದ ಬೆಳೆಯಲ್ಲಿ ಹೆಕ್ಟೇರಿಗೆ ೮೩,೮೦೦ ಕ್ವಿಂಟಾಲ್ ಇಳುವರಿ ಪಡೆದು ತಾಲೂಕು ಮಟ್ಟದಲ್ಲಿ 2011-12ನೇ ಸಾಲಿನ "ಕೃಷಿ ಪ್ರಶಸ್ತಿ" ಯನ್ನು ಕಿನ್ನಿಗೋಳಿ ಸಮೀಪದ ಎಳತ್ತೂರು...

Close