ಮೌಲ್ಯಾಧಾರಿತ ಶಿಕ್ಷಣ ಪದ್ದತಿ ಬಲಪಡಿಸಿ- ಡಾ.ಎಚ್.ಎಸ್.ಬಲ್ಲಾಳ್

Bhagyavan Sanil

ಮೂಲ್ಕಿ: ಆಧುನಿಕ ಯುಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಅಂತರಿಕ ಬಲವರ್ದನೆ ಮತ್ತು ಸ್ವ ಉದ್ಯೋಗಕ್ಕೆ ಪೂರಕವಾದ ಶೈಕ್ಷಣಿಕ ವ್ಯವಸ್ಥೆಗಳನ್ನು ಹೆಚ್ಚಿಸಿ ಮೌಲ್ಯಾಧಾರಿತ ಶಿಕ್ಷಣ ಪದ್ದತಿಯನ್ನು ಬಲಪಡಿಸಬೇಕು ಎಂದು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಅಧ್ಯಕ್ಷರಾದ ಡಾ.ಎಚ್.ಎಸ್.ಬಲ್ಲಾಳ್ ಹೇಳಿದರು.
ಅಕಾಡಮಿಯ ಆಡಳಿತಾಧಿಕಾರಿಗಳಾದ ಡಾ.ಎಚ್.ಶಾಂತಾರಾಮ್ ಹಾಗೂ ಡಾ.ಜಿ.ಕೆ.ಪ್ರಭು, ಕುಲಸಚಿವರು, ಮಣಿಪಾಲ ವಿಶ್ವವಿದ್ಯಾಲಯ ಇವರನ್ನೊಳಗೊಂಡ ಪರಿಶೀಲನಾ ಸಮಿತಿಯು ವಿಜಯ ಕಾಲೇಜಿಗೆ ಭೇಟಿ ನೀಡಿದ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಿತಿಯು ಕಾಲೇಜಿನ ಎಲ್ಲಾ ವಿಭಾಗಗಳು, ಪ್ರಯೋಗಾಲಯಗಳು, ಕ್ಯಾಂಟೀನ್, ಗ್ರಂಥಾಲಯ, ವಸತಿ ನಿಲಯಕ್ಕೆ ಸಂಬಂಧಪಟ್ಟ ಹಾಗೂ ಇನ್ನುಳಿದ ಭೌತಿಕ ಸವಲತ್ತುಗಳನ್ನು ವೀಕ್ಷಿಸಿತು. ಆಡಳಿತಾತ್ಮಕವಾದ ವಿಚಾರಗಳಿಗೆ ಸಂಬಂಧಪಟ್ಟು ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯರನ್ನು, ವಿವಿಧ ಶೈಕ್ಷಣಿಕ ವಿಭಾಗದ ಮುಖ್ಯಸ್ಥರನ್ನು, ಅಧ್ಯಾಪಕರನ್ನು, ಸಿಬ್ಬಂಧಿ ವರ್ಗದವರನ್ನು ಹಾಗೂ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಸಂಸ್ಥೆಯ ಸಕಾರಾತ್ಮಕ ಬೆಳವಣಿಗೆ, ಕೊರತೆಗಳ ಕುರಿತಾದ ವಿಚಾರವಿನಿಮಯ ಮಾಡಿದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ, ಪ್ರಾಂಶುಪಾಲರಾದ ಪ್ರೊ.ಕೆ.ಆರ್ ಶಂಕರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ಶಿಕ್ಷಕ ರಕ್ಷಕ ಸಂಘದ ಅಶೋಕ್ ಕುಮಾರ್ ಶೆಟ್ಟಿ, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಡಾ.ಕೆ.ಪಿ.ಮಧ್ಯಸ್ಥ, ವಿ.ವಿಶ್ವನಾಥ ಕಾಮತ್, ಪ್ರೊ.ನಾಗೇಶ್ ಶೆಣೈ ಉಪಸ್ಥಿತರಿದ್ದರು.

Kinnigoli22021307

Comments

comments

Leave a Reply

Read previous post:
ಕವತ್ತಾರು : ಕಾಂಕ್ರೀಟು ರಸ್ತೆ ಶಿಲಾನ್ಯಾಸ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವತ್ತಾರು ಪರಿಶಿಷ್ಟ ಪಂಗಡದ ಕಾಲನಿ ರಸ್ತೆಗೆ ತಾ.ಪಂ. ಅನುದಾನದಿಂದ ೨೫ ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟು ಕಾಮಗಾರಿಗೆ ಶಿಲಾನ್ಯಾಸ ಬುಧವಾರ ನಡೆಯಿತು....

Close