ಮೂಲ್ಕಿ: ಅಂತರ ಕಾಲೇಜು ಪ್ರತಿಭಾ ಸ್ಪರ್ಧೆ

Byagyavan Sanil
ಮೂಲ್ಕಿ: “ವಿದ್ಯಾರ್ಥಿಗಳ ಶೃಜನಶೀಲತೆಯನ್ನು ಉನ್ನತಿಗಳಿಸಲು ಮತ್ತು ಧನಾತ್ಮಕ ರೀತಿಯಲ್ಲಿ ಸ್ಪರ್ಧಾ ಭಾವನೆಯನ್ನು ಮೂಡಿಸಿ ಅವರನ್ನು ಸಾಧಕರನ್ನಾಗಿಸುವ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ” ಎಂದು ಎಂ.ಆರ್.ಪಿ.ಎಲ್ ಡಿಜಿಎಂ ಲಕ್ಷ್ಮೀ ಕುಮಾರನ್ ಹೇಳಿದರು. ಅವರು ಮೂಲ್ಕಿ ವಿಜಯಾ ಕಾಲೇಜಿನ ಸುವರ್ಣ ಮಹೋತ್ಸವ ವರ್ಷ ಕಾರ್ಯಕ್ರಮದ ಪ್ರಯುಕ್ತ ನಡೆದ ಅಂತರ ಕಾಲೇಜು ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.
ಅಧ್ಯಕ್ಷತೆಯನ್ನು ಹನುಮಾನ್ ಸಮೂಹ ಸಂಸ್ಥೆಯ ವ್ಯವಸ್ಥಾಪನಾ ನಿರ್ದೇಶಕರಾದ ವಿಲಾಸ್ ನಾಯಕ್ ವಹಿಸಿ ಶುಭ ಹಾರೈಸಿದರು. ಜೇಸಿ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಸಮಾರೋಪ ಭಾಷಣ ಗೈದರು. ಅತಿಥಿಯಾಗಿ ಉಡುಪಿ ಜಿಪಂ.ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್,ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪಮೀದಾ ಬೇಗಂ, ವಿದ್ಯಾರ್ಥ ಕ್ಷೇಮಪಾಲನಾಧಿಕಾರಿ ಪ್ರೊ.ನಾರಾಯಣ, ವಿಜಯ ಕಲಾ ಸಂಗಮ ಸಮಿತಿ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಕಾರ್ಯದರ್ಶಿ ಪ್ರೊ.ಚೆನ್ನ ಪೂಜಾರಿ, ತೀರ್ಪುಗಾರರಾದ ರಂಗಕರ್ಮಿ ಪರಮಾನಂದ ಸಾಲ್ಯಾನ್, ಕೆ.ಬಿ.ಸುರೇಶ್ ಮತ್ತು ಸುರೇಶ್ ಕೊಲಕಾಡಿ ಉಪಸ್ಥಿತರಿದ್ದರು. ಪ್ರೊ.ಚೆನ್ನ ಪೂಜಾರಿ ಸ್ವಾಗತಿಸಿದರು,ಅಮಿತ್ ಪೈ ನಿರೂಪಿಸಿದರು, ದುರ್ಗಾಗಣೇಶ್ ವಂದಿಸಿದರು.
ಸ್ಪರ್ಧೆ ಫಲಿತಾಂಶ: ವಿಜಯ ಕಲಾ ಸಂಗಮ 2013 ಪ್ರಥಮ ಪ್ರಶಸ್ತಿ 7 ಸಾವಿರ ನಗದು ಉಡುಪಿ ಅಜ್ಜರಕಾಡು ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜು, ದ್ವಿತೀಯ ಪ್ರಶಸ್ತಿ 5 ಸಾವಿರ ನಗದು ಬಜೆಪೆ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು, ತ್ರತೀಯ ಪ್ರಶಸ್ತಿ 3 ಸಾವಿರ ನಗದು ಉಡುಪಿ ಉಪೇಂದ್ರ ಪೈ ಮೇಮೋರಿಯಲ್ ಕಾಲೇಜು, ಉತ್ತಮ ನಿರೂಪಕ ಪ್ರಶಸ್ತಿಯನ್ನು ಜಿ.ಶಂಕರ್ ಸರ್ಕಾರಿ ಕಾಲೇಜಿನ ಮೈತ್ರೇಯಿ ಬಳ್ಳಾಲ್ ಪಡೆದುಕೊಂಡರು, ಕಾಪು ಸರಕಾರಿ ಪ್ರಥಮದರ್ಜೆ ಕಾಲೇಜು ಮತಯ್ತು ಮೂಡಬಿದ್ರೆ ಮಹಾವೀರ ಕಾಲೇಜು ಪ್ರೋತ್ಸಾಹಕ ಬಹುಮಾನಗಳಿಸಿತು.

Kinnigoli23021301

 

Comments

comments

Leave a Reply

Read previous post:
ಬಟ್ಟಕೋಡಿ-“ನಿಸರ್ಗ ಲೇಔಟ್” ನ ಭೂಮಿ ಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿ ಬಟ್ಟಕೋಡಿ ಸಮೀಪದಲ್ಲಿ ಕಟೀಲೇಶ್ವರಿ ಪ್ರಾಪರ್ಟಿಸ್ ಮತ್ತು ಡೆವಲಪ್ಪರ‍್ಸ್ ಮಾಲಕತ್ವದ "ನಿಸರ್ಗ ಲೇಔಟ್" ನ ಭೂಮಿ ಪೂಜೆ ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರ...

Close