ಮುಲ್ಕಿ ಸನ್ಮಾನ: ಪ್ರಾಧ್ಯಾಪಕಿ ಪ್ರೊ| ಯಶೋಧರ ಕೆ.

Bhagyavan Sanil

ಮುಲ್ಕಿ: ವಿಜಯ ಕಾಲೇಜು, ನೂತನ ಮಿನಿ ಅಡಿಟೋರಿಯಂನಲ್ಲಿ ಪ್ರೊ| ಯಶೋಧರ ಕೆ. ಅವರ ಸನ್ಮಾನ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ೩೮ ವರ್ಷಗಳಿಂದ ಸಂಸ್ಕೃತ ಭಾಷೆಯ ಪ್ರಾಧ್ಯಾಪಕಿಯಾಗಿ ಅಮೂಲ್ಯ ಸೇವೆ ಸಲ್ಲಿಸಿದ ಪ್ರೊ| ಯಶೋಧರ ಕೆ. ಭಾಷಾ ವಿಭಾಗದ ಸದಸ್ಯರು, ಮಹಿಳಾ ಉಪನ್ಯಾಸಕಿಯರು ಪ್ರೀತಿಯಿಂದ ಸನ್ಮಾನಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಜಯರಾಮ ಬಿ. ಫಲ ತಾಂಬೂಲ ಕೊಟ್ಟು ಗೌರವಿಸಿದರು. ಹಿಂದಿ ವಿಭಾಗದ ಅನಸೂಯ ಕರ್ಕೇರಾ ಶುಭ ಹಾರೈಸಿದರು, ಪ್ರೊ| ಎಸ್. ಹಯವದನ ಉಪಾಧ್ಯ ಮತ್ತು ಸೋಮಶೇಖರ ಭಟ್ ಕಾರ್ಯಕ್ರಮ ನಿರ್ವಹಿಸಿದರು, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್ ಕುಡ್ವಾ, ಪದವಿ ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ ಉಪಸ್ಥಿತರಿದ್ದರು.

Kinnigoli23021302

 

Comments

comments

Leave a Reply

Read previous post:
ಮೂಲ್ಕಿ: ಅಂತರ ಕಾಲೇಜು ಪ್ರತಿಭಾ ಸ್ಪರ್ಧೆ

Byagyavan Sanil ಮೂಲ್ಕಿ: "ವಿದ್ಯಾರ್ಥಿಗಳ ಶೃಜನಶೀಲತೆಯನ್ನು ಉನ್ನತಿಗಳಿಸಲು ಮತ್ತು ಧನಾತ್ಮಕ ರೀತಿಯಲ್ಲಿ ಸ್ಪರ್ಧಾ ಭಾವನೆಯನ್ನು ಮೂಡಿಸಿ ಅವರನ್ನು ಸಾಧಕರನ್ನಾಗಿಸುವ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ" ಎಂದು...

Close