ಶ್ರೀ ಶಾರದ ಮೋಡೆಲ್ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ: ವಿನಯ, ಸೌಜನ್ಯ ರೂಪಿಸುವ ಸಂಸ್ಕಾರಯುತ ಮೌಲ್ಯವರ್ಧಕ ಶಿಕ್ಷಣ ನೀಡಿದಾಗ ನಮ್ಮ ದೇಶ ಸಮೃದ್ದ ರಾಷ್ಟ್ರವಾಗುವುದು ಎಂದು ಸುಬ್ರಹ್ಮಣ್ಯ ನರಸಿಂಹ ಸ್ವಾಮಿ ಮಠಾದೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಶಿಮಂತೂರು ಶ್ರೀ ಶಾರದ ಮೋಡೆಲ್ ಪ್ರಾಥಮಿಕ ಶಾಲೆಯ ಹೊಸ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ಮೌಲಾನಾ ಅಬು ಸೂಫಿಯಾನ ಮದನಿ, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಶಾಲಾ ಅಧ್ಯಕ್ಷ ಹರಿಕೃಷ್ಣ ಪುನರೂರು, ಕೋಶಾಧಿಕಾರಿ ಕೆ. ಭುವನಾಭಿರಾಮ ಉಡುಪ, ಪದ್ಮನೂರು ಕ್ಲಸ್ಟರ್ ಸಿ.ಆರ್.ಪಿ. ಜಗದೀಶ್ ನಾವಡ, ಶಾರದ ಹಿ.ಪಾ. ಶಾಲೆ ಮುಖ್ಯಶಿಕ್ಷಕ ಎಂ.ಜಿ. ಶಿವರುದ್ರಪ್ಪ, ರಮೇಶ್ ಕುಂದರ್, ಕರುಣಾಕರ ಆಳ್ವ, ಸೀತಾರಾಮ ಶೆಟ್ಟಿ, ನಾರಾಯಣ ಗುಜರನ್, ವಿಠಲ ಶಾಸ್ತ್ರಿ, ರಮೇಶ್ ಪುನರೂರು, ಅಂಗನವಾಡಿ ಶಿಕ್ಷಕಿ ಶಶಿಕಲ ಉಪಸ್ಥಿತರಿದ್ದರು.
ಶಾಲಾ ಕಾರ್ಯದರ್ಶಿ ಧರ್ಮಾನಂದ ಕೆ. ಕುಂದರ್ ಪ್ರಸ್ತಾವನೆಗೈದರು. ಶಾರದ ಮೋಡೆಲ್ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸುಚಿತ್ರ ಸ್ವಾಗತಿಸಿದರು, ಶಾರದ ಹೈಸ್ಕೂಲು ಮುಖ್ಯ ಶಿಕ್ಷಕ ಪ್ರಥ್ವೀಶ್ ಕರಿಕೆ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli23021308

Kinnigoli23021307

Kinnigoli23021306

Kinnigoli23021309

Comments

comments

Leave a Reply

Read previous post:
GEETHA KAMATH – PRESIDENT OF S.I. S. C IN SOUTH KOREA

Giridhar Mallya Mrs. Geeta Kamath wife of Commander (retd) Giridhara Mallya from Kinnigoli has been elected as the first ever...

Close