ಅಂಗರಗುಡ್ಡೆ : ಸ್ವಲಾತ್ ಹಾಗೂ ದಪ್ಪ್ ರಾತೀಭ್ ನೇರ್ಚ್

Raghunath Kamath
ಕಿನ್ನಿಗೋಳಿ : ಸರ್ವ ಧರ್ಮ ಮಂದಿರಗಳು ಸಮಾಜದ ಜನರಲ್ಲಿ ಶಾಂತಿ ಸೌಹಾರ್ದತೆ ಮೂಡಿಸುವ ಕಾರ್ಯ ಮಾಡಬೇಕು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಇತ್ತೀಚೆಗೆ ಅಂಗರಗುಡ್ಡೆ ಅಲ್ ಮದರಸತುಲ್ ಬದ್ರಿಯಾ ಜುಮ್ಮಾ ಮಸೀದಿಯ ಆಶ್ರಯದಲ್ಲಿ ನಡೆದ ೫ನೇ ಸ್ವಲಾತ್ ವಾರ್ಷಿಕ ಹಾಗೂ ೨೦ನೇ ದಪ್ಪ್ ರಾತೀಭ್ ನೇರ್ಚ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮುಲ್ಕಿ ಕೇಂದ್ರ ಶಾಫೀ ಜುಮ್ಮಾ ಮಸೀದಿ ಮುದರ್ರಿಸ್ ನ ಎಸ್.ಬಿ. ಮೊಹಮ್ಮದ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದ್ದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ಮುಲ್ಕಿ ಜುಮ್ಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಎಂ.ಬಿ. ನೂರ್ ಮಹಮ್ಮದ್, ಹುಸೇನ್ ದಾರಿಮಿ ರೆಂಜಲಾಡಿ, ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಆಶ್ವಿನ್ ಪಿರೇರಾ ಮೂಡಬಿದಿರೆ, ಜಾಫರ್ ಸಾದಿಕ್ ಫೈಝಿ, ಉಮ್ಮರ್ ಫಾರೂಕ್ ಮದನಿ, ಹಸನ್ ಸಖಾಫಿ, ಟಿ.ಕೆ. ಇಬ್ರಾಹಿಂ ಮಸ್ಲಿಯಾರ್, ಶಾಫೀ ಬೆಳ್ಳಾರ್, ಬಿ.ಎಂ.ಅಸೀಫ್, ಕೆ.ಪಿ ಇಬ್ರಾಹಿಂ, ರಿಯಾಜ್, ಎಂ. ರಿಝವಾನ್, ಅಬ್ದುಲ್ ರಹಿಮಾನ್ ಗೇರುಕಟ್ಟೆ, ಮಹಮ್ಮದ್ ಶರೀಫ್ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು. ಸೈಯದ್ ಅನಸ್ ತಂಗಳ್ ದುವಾ ಪ್ರಾರ್ಥನೆ ಹಾಗೂ ಯು.ಕೆ ಅಜೀಜ್ ದಾರಿಮಿ ಚೊಕ್ಕಬೆಟ್ಟು ಧಾರ್ಮಿಕ ಮತ ಪ್ರವಚನ ನೀಡಿದರು. ಮಸೀದಿ ಕಾರ್ಯದರ್ಶಿ ನಿಸಾರ್ ಅಹಮದ್ ಸ್ವಾಗತಿಸಿ ಎಂ.ಎಚ್. ಅಜೀಜ್ ವಂದಿಸಿದರು.

Kinnigoli-24021303

 

Comments

comments

Leave a Reply

Read previous post:
ಹಾಲು ಉತ್ಪಾದಕರ ಸಹಕಾರಿ ಸಂಘ -ಸನ್ಮಾನ

Raghunath Kamath ಕಿನ್ನಿಗೋಳಿ : ಮಂಗಳೂರು ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಕ್ಷೇಮಾಭ್ಯುದಯ ಘಟಕದ ಆಶ್ರಯದಲ್ಲಿ ಕಡಂದಲೆ ಹಾಗೂ ಮುಚ್ಚೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಗಳಾಗಿ...

Close