ಹಾಲು ಉತ್ಪಾದಕರ ಸಹಕಾರಿ ಸಂಘ -ಸನ್ಮಾನ

Raghunath Kamath

ಕಿನ್ನಿಗೋಳಿ : ಮಂಗಳೂರು ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಕ್ಷೇಮಾಭ್ಯುದಯ ಘಟಕದ ಆಶ್ರಯದಲ್ಲಿ ಕಡಂದಲೆ ಹಾಗೂ ಮುಚ್ಚೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಡಂದಲೆ ಪ್ರವೀಣ್ ಕುಮಾರ್ ಹಾಗೂ ಮುಚ್ಚೂರು ದಯಾನಂದ ಐ. ದಯಾನಂದ ಶೆಟ್ಟಿ ಅವರಿಗೆ ಸನ್ಮಾನ ಹಾಗೂ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಅವರನ್ನು ಗೌರವಿಸುವ ಕಾರ್ಯಕ್ರಮ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ನಿರ್ದೇಶಕ ಸುಚರಿತ ಶೆಟ್ಟಿ, ಕಾರ್ಯನಿರ್ವಾಹಕ ಡಾ| ಬಿ. ವಿ. ಸತ್ಯನಾರಾಯಣ ದ.ಕ. ಉಡುಪಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷ ಕೇಶವ ರಾವ್ ಮಂಚಿ, ಮುಚ್ಚೂರು ಹಾಲು ಉತ್ಪಾದಕರ ಹಕಾರಿ ಸಂಘದ ಅಧ್ಯಕ್ಷ ವಿದ್ಯಾಧರ ಹೆಗ್ಡೆ, ಕಾರ್ಯದರ್ಶಿ ಚಂದ್ರಹಾಸ ಕಲ್ಲಮುಂಡ್ಕೂರು, ಶೇಖರ ಟಿ. ತಾಕೊಡೆ ಉಪಸ್ಥಿತರಿದ್ದರು.

Kinnigoli-24021302

 

 

Comments

comments

Leave a Reply

Read previous post:
ಗೋಳಿಜೋರ – ಭಜನಾ ಮಂಗಲೋತ್ಸವ

Raghunath Kamath ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಗೋಳಿಜೋರ ಶ್ರೀ ಹರಿಹರ ಭಜನಾ ಮಂದಿರದಲ್ಲಿ ವಾರ್ಷಿಕ ಭಜನಾ ಮಂಗಲೋತ್ಸವ ನಡೆಯಿತು. ಉದ್ಯಮಿ ಶ್ರೀನಾಥ್ ಕೆಂಚನಕೆರೆ ದೀಪ ಬೆಳಗಿಸಿ ಮಂಗಲೋತ್ಸವಕ್ಕೆ...

Close