ಪದ್ಮನೂರು : ಮಿಲಾದುನ್ನಬಿ ಆಚರಣೆ

ಕಿನ್ನಿಗೋಳಿ : ಧಾರ್ಮಿಕ ಚಿಂತಕರ ಉತ್ತಮ ಸಂದೇಶದ ಸಾರವನ್ನು ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಆದರ್ಶ ನಾಗರೀಕರಾಗಿ ಬಾಳಬಲ್ಲರು ಎಂದು ಕಿನ್ನಿಗೋಳಿ ಮಸೀದಿ ಖತೀಬರಾದ ಜನಾಬ್ ಅಬ್ದುಲ್ ಲತೀಫ್ ಸಖಾಫಿ ಹೇಳಿದರು.
ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಆಶ್ರಯದಲ್ಲಿ ಶನಿವಾರ ನಡೆದ ಮಿಲಾದುನ್ನಬಿ ಆಚರಣೆ ಸಂದರ್ಭ ಮಾತನಾಡಿದರು.
ಕೆ.ಎಸ್. ಹುಸೇನಬ್ಬ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ದುರ್ಗಾಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ಚಚ್ ಧರ್ಮಗುರು ಫಾ| ರೋನಾಲ್ಡ್ ಕುಟಿನ್ಹೊ, ಕಿನ್ನಿಗೋಳಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ವೇದವ್ಯಾಸ ಉಡುಪ, ಶಿಕ್ಷಕ ಬಿ. ಎಂ. ಮುಭಾರಕ್ ಜೋಸೆಫ್ ಕ್ವಾಡ್ರಸ್, ಹೆನ್ರಿ ಮಥಾಯಸ್ ಉಪಸ್ಥಿತರಿದ್ದರು.
ಕೆ.ಎ. ಅಬ್ದುಲ್ಲಾ ಸ್ವಾಗತಿಸಿ, ಹೆರಿಕ್ ಪಾಯಸ್ ವಂದಿಸಿದರು. ಕೆ.ಎ. ಖಾದರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-24021304

Kinnigoli-24021305

 

Comments

comments

Leave a Reply

Read previous post:
ಅಂಗರಗುಡ್ಡೆ : ಸ್ವಲಾತ್ ಹಾಗೂ ದಪ್ಪ್ ರಾತೀಭ್ ನೇರ್ಚ್

Raghunath Kamath ಕಿನ್ನಿಗೋಳಿ : ಸರ್ವ ಧರ್ಮ ಮಂದಿರಗಳು ಸಮಾಜದ ಜನರಲ್ಲಿ ಶಾಂತಿ ಸೌಹಾರ್ದತೆ ಮೂಡಿಸುವ ಕಾರ್ಯ ಮಾಡಬೇಕು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್...

Close