ಕಟೀಲು-ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

Bhagyavan Sanil
ಮೂಲ್ಕಿ:ಸ್ವಾತಂತ್ರ್ಯ ಹೋರಾಟದ ಸಂಕ್ರಮಣ ಕಾಲದಲ್ಲಿ ಸಾರ್ವಜನಿಕ ಗಣೇಶೋತ್ಸವಗಳಿಂದ ಜನ ಸಂಘಟಿತರಾಗಿದ್ದಂತೆ ಹಿಂದೂ ಸಮಾಜದ ಮೇಲಾಗುವ ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಂಘಟಿತರಾಗುವುದು ಬಹಳ ಅಗತ್ಯ ಎಂದು ಹಿಂದೂ ಜಾಗರಣ ವೇದಿಕೆಯ ಸತ್ಯಜೀತ್ ಸುರತ್ಕಲ್ ಹೇಳಿದರು.
ಕಟೀಲು ದೇವಸ್ಥಾನದ ರಥ ಬೀದಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಟೀಲು ಘಟಕದ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಹಿಂದೂ ಯುವಕ ಯುವತಿಯರನ್ನು ದುಶ್ಚಟಗಳ ದಾಸರನ್ನಾಗಿಸಿ ಸುಳ್ಳು ಪ್ರಚಾರಗಳ ಮೂಲಕ ಹಿಂದೂ ಸಮಾಜದ ಅವನತಿಯನ್ನು ಬಯಸುವ ದುಶ್ಕರ್ಮಿಗಳ ಕಾರ್ಯತಂತ್ರವನ್ನು ನಿಷ್ಕ್ರೀಯವನ್ನಾಗಿಸಲು ಯುವ ಪೀಳಿಗೆಗೆ ದಾರ್ಮಿಕ ಸಂಸ್ಕಾರ ಮತ್ತು ನೈತಿಕ ತಿಳುವಳಿಕೆಯನ್ನು ನೀಡಲು ಸಂಘಟಿತರನ್ನಾಗಿಸಬೇಕು ಹಾಗೂ ಸ್ವಾಮೀ ವಿವೇಕಾನಂದರ ತತ್ವ ಆದರ್ಶಗಳ ಬಗ್ಗೆ ತಿಳಿಸಿ ಅವರನ್ನು ಆಂತರಿಕವಾಗಿ ಸದೃಢರನ್ನಾಗಿಸಬೇಕು ಎಂದರು.
ಕಟೀಲು ದೇವಳದ ಅರ್ಚಕ ವೇಮೂ.ಅನಂತಪದ್ಮನಾಭ ಆಸ್ರಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿ.ಪಂ ಸದಸ್ಯ ಈಶ್ವರ ಕಟೀಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು, ತಾ.ಪಂ.ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಪಂ.ಉಪಾಧ್ಯಕ್ಷೆ ಸರೋಜಿನಿ, ಕೊಡೆತ್ತೂರು ಜಯರಾಂ ಶೆಟ್ಟಿ, ಸಂಸ್ಥೆಯ ಅಧ್ಯಕ್ಷ ಗಣೇಶ್ ಶೆಟ್ಟಿ, ಕಾರ್ಯದರ್ಶಿ ದೇವೀ ಪ್ರಸಾದ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Kinnigoli25021301

Comments

comments

Leave a Reply

Read previous post:
ಕಟೀಲು ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ

Mithuna Kodethoor ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ರಾಜ್ಯ ಹೆದ್ದಾರಿಯಲ್ಲಿ ನಂದಿನಿ ನದಿ ಸೇತುವೆ ಬಳಿ ಆಲದಮರದ ಬೃಹತ್ ಕೊಂಬೆ ಆಕಸ್ಮಿಕವಾಗಿ ರಸ್ತೆಗೆ ಉರುಳಿ...

Close