ಏಳಿಂಜೆ ಉಳೆಪಾಡಿ ಗುಡ್ಡ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ

ಕಿನ್ನಿಗೋಳಿ ಸಮೀಪದ ಏಳಿಂಜೆ ಉಳೆಪಾಡಿ ಗುಡ್ಡ ಪ್ರದೇಶದಲ್ಲಿ ಆಕಸ್ಮಿಕವಾಗಿ ಸುಮಾರು 10 ಎಕರೆ ಜಾಗಕ್ಕೆ ಬೆಂಕಿ ಬಿದ್ದು ಮರ ಗಿಡಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ಏಳಿಂಜೆ ಉಳೆಪಾಡಿಯ ಕುರುಂಡೆ ಲಚ್ಚಿಲ್, ಕುಮೇರು, ಕಲ್ಲಿನ ಕೋರೆ ದಂಬೆದಡಿ ಸಮೀಪದ ಗುಡ್ಡ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು 12.15ರ ಸಮಯ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ಇಡೀ ಪ್ರದೇಶವನ್ನು ಆವರಿಸಿತ್ತು ಹತ್ತಿರದ ಬಯಲು ಮೈದಾನಕ್ಕೂ ಬೆಂಕಿ ಪಸರಿಸಿತು. ತಕ್ಷಣ ಸ್ಥಳೀಯರು ಬೆಂಕಿಯ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿ ಬೆಂಕಿಯನ್ನು ನಂದಿಸಲು ಶ್ರಮಿಸಿದರು.
ಏಳಿಂಜೆ ಉಳೆಪಾಡಿಯ ಸುನಿಲ್ ವಾಸ್, ಪೆಡ್ರಿಕ್ ರೇಗೋ, ಲಾರೆನ್ಸ್ ಡಿಸೋಜ, ಪೆಡ್ರಿಕ್ ಡಿ’ಸೋಜ, ಕವಿತ ಪೂಜಾರಿ, ಮತ್ತು ಜೆರಾಲ್ಡ್ ವಾಸ್ ಅವರ ಜಾಗಗಳು ಬೆಂಕಿಗೆ ಆಹುತಿಯಾಗಿವೆ.
ಜಿ ಎಸ್. ಸಿದ್ಧಗೌಡ ನೇತೃತ್ವದ ಮಂಗಳೂರು ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿಗಳು ಹಾಗೂ ಮೂಲ್ಕಿ ಪೊಲೀಸರು ತುರ್ತು ಸ್ಪಂದಿಸಿ ಕಾರ್ಯಾಚರಣೆ ನಡೆಸಿದರು. ಗುಡ್ಡ ಪ್ರದೇಶಕ್ಕೆ ಬೆಂಕಿ ಬಿದ್ದ ಕಾರಣ ಸ್ಪಷ್ಟವಾಗಿಲ್ಲ.

Kinnigoli-26021307

Kinnigoli-26021308

Kinnigoli-26021309

Kinnigoli-260213010

Kinnigoli-260213011

Kinnigoli-260213012

Kinnigoli-260213016

Kinnigoli-260213013

Kinnigoli-260213015

Kinnigoli-260213014

Comments

comments

Leave a Reply

Read previous post:
ವೈದ್ಯರಿಗೆ ಸನ್ಮಾನ

Mithuna Kodethoor ಮಂಗಳೂರು ಕರ್ನಾಟಕ ಆಯುರ್ವೇದ ಕಾಲೇಜಿನಲ್ಲಿ ಭಾನುವಾರದಂದು ನಡೆದ ಸಮಾರಂಭದಲ್ಲಿ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈಧ್ಯ ಮಂಡಳಿಯ ಅಧ್ಯಕ್ಷ ಡಾ|| ಸತ್ಯಮೂರ್ತಿ ಭಟ್ ಮತ್ತು...

Close