25 ಮನೆಗಳಿಗೆ ಉಚಿತ ಕುಡಿಯುವ ನೀರು

Bhagyavan sanil

ಮೂಲ್ಕಿ: ದೇವಸ್ಥಾನ ಗ್ರಾಮಾಭಿವೃದ್ಧಿಗೆ ಹೆಬ್ಬಾಗಿಲಾದರೆ ಪ್ರದೇಶದ ಜನಜೀವನದ ಉನ್ನತಿಗೊಂಡು ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಶಿಮಂತೂರು ಶ್ರೀ ಅದಿಜನಾರ್ಧನ ದೇವಸ್ಥಾನದ ವತಿಯಿಂದ ಶಿಮಂತೂರು ಗ್ರಾಮದ 25 ಮನೆಗಳಿಗೆ ಉಚಿತ ಕುಡಿಯುವ ನೀರಿನ ಯೋಜನೆ, ಸಾರ್ವಜನಿಕ ಶೌಚಾಲಯ ಮತ್ತು ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗ್ರಾಮಕ್ಕೆ ಅಗತ್ಯ ವಿರುವ ಮೂಲ ಭೂತ ಸೌಕರ್ಯವನ್ನು ನೀಡುವಲ್ಲಿ ಎಲೆ ಮರೆಯ ಕಾಯಿಯಂತೆ ಶಿಮಂತೂರು ದೇವಸ್ಥಾನ ಮುಂಚೂಣಿಯಲ್ಲಿದ್ದು ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ದೇವಾಲಯಗಳು ಇದರಂತೆ ನಡೆದರೆ ನಮ್ಮ ನಾಡು ನುಡಿಯ ಅಭಿವೃದ್ಧಿ ಸಾಧ್ಯ ಎಂದರು.
ಮುಂಬೈ ಡಾ.ಪದ್ಮನಾಭ ಶೆಟ್ಟಿಯವರು ನಿರ್ಮಿಸಿಕೊಟ್ಟ 30ಸಾವಿರ ಲೀ. ಸಾಮಥ್ಯದ ಒವರ್‌ಹೆಡ್ ಟ್ಯಾಂಕ್‌ನ್ನು ಶಿಮಂತೂರು ನಡಿಗುತ್ತು ಭೋಜ ಮಾಸ್ಟರ್ ಸಾರ್ವಜನಿಕ ಸೇವೆಗೆ ಬಿಡುಗಡೆಗೊಳಿಸಿದರು. ಶೌಚಾಲಯ ಮತ್ತು ಆರೋಗ್ಯ ವಿಮೆ ಕಾರ್ಯಕ್ರಮಕ್ಕೆ ಶಾಸಕ ಅಭಯಚಂದ್ರ ಜೈನ್ ಚಾಲನೆ ನೀಡಿದರು.
ವಿಟ್ಲ ಮಹಾಲಿಂಗೇಶ್ವರ ದೇವಸ್ಥಾನದ ಮುಂಬೈ ಸಮಿತಿ ಅಧ್ಯಕ್ಷ ಕುಸುಮಾಧರ ಶೆಟ್ಟಿ, ಅಜೆಕಾರು ವಿಷ್ನು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವರಾಮ.ಜಿ.ಶೆಟ್ಟಿ, ದೇವಳದ ಆಡಳಿತ ಮೊಕ್ತೇಸರ ಶಿಮಂತೂರು ಬಾವ ಉದಯ ಶೆಟ್ಟಿ, ಮೋಹನ್ ಸುವರ್ಣ, ಜಯ, ಎ.ಶೆಟ್ಟಿ, ಪದ್ಮಿನಿ ಶೆಟ್ಟಿ, ಶೇಖರ ಶೆಟ್ಟಿ, ರಘುರಾಮ ಶೆಟ್ಟಿ,ಎಸ್. ಚಂದ್ರಹಾಸ ಸುವರ್ಣ, ಕೊಲ್ನಾಡು ಗುತ್ತಯ ರಾಮಚಂದ್ರ ನಾಯ್ಕ್, ಎನ್.ಪಿ.ಶೆಟ್ಟಿ, ಕಿಲ್ಪಾಡಿ ಗ್ರಾಮ ಪಂ.ಅಧ್ಯಕ್ಷೆ ಶಾರದಾ ವಸಂತ್, ಸಂಜೀವ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.ಚಿತ್ರ:೨೪ಎಂ-ಎಲ್ಕೆ೧ ಮುಂಬೈ ಡಾ.ಪದ್ಮನಾಭ ಶೆಟ್ಟಿಯವರು ನಿರ್ಮಿಸಿಕೊಟ್ಟ ನ್ನು ನಡಿಗುತ್ತು ಭೋಜ ಮಾಸ್ಟರ್ ಬಿಡುಗಡೆಗೊಳಿಸಿದರು.

Kinnigoli-26021305

 

 

Comments

comments

Leave a Reply

Read previous post:
ಕಿನ್ನಿಗೋಳಿ ಲಾರಿ ಮಾಲಕರ ಸಭೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿರುವ ಕೈಗಾರಿಕ ಉದ್ದಿಮೆಗಳ ನೆಪದಿಂದ ಹೊರ ರಾಜ್ಯದ ಲಾರಿ ಟಿಪ್ಪರುಗಳು ಮುಲ್ಕಿ-ಕಿನ್ನಿಗೋಳಿ ಪರಿಸರದಲ್ಲಿ ಬಾಡಿಗೆ ಮಾಡುತ್ತಿರುವುದರಿಂದ ಸ್ಥಳೀಯ ಲಾರಿ ಮಾಲಕರು ಸಂಕಷ್ಟ...

Close