ತೋಕೂರು : ಸಮುದಾಯ ಅಭಿವೃದ್ಢಿ ಮಾಹಿತಿ ಶಿಬಿರ

ಕಿನ್ನಿಗೋಳಿ: ರೋವರ್ಸ್ ಮತ್ತು ರೇಂಜರ್ ವಿದ್ಯಾರ್ಥಿಗಳಲ್ಲಿ ಶಿಸ್ತು, ತ್ಯಾಗ ಮನೋಬಾವ, ಸಮಾಜ ಸೇವೆಯ ಗುಣಗಳು ಬೆಳೆದು ಸಮುದಾಯದ ಅಭಿವೃದ್ಢಿಯಾಗುವಲ್ಲಿ ಸಹಕಾರಿಯಾಗುತ್ತದೆ ಎಂದು ಮಂಗಳೂರು ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಜಿಲ್ಲಾಸಂಸ್ಥೆ ಸಹಾಯಕ ಆಯುಕ್ತ ಸರ್ವೋತ್ತಮ ಅಂಚನ್ ಹೇಳಿದರು
ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಠೆ, ತೋಕೂರು ತಪೋವನದಲ್ಲಿ ಸೋಮವಾರ ನಡೆದ ರೋವರಿಂಗ್ ಮತ್ತು ಸಮುದಾಯ ಅಭಿವೃದ್ಢಿ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ದ.ಕ. ಮತ್ತು ಉಡುಪಿ ಸ್ಕೌಟ್ಸ್ ಸಹಾಯಕ ರಾಜ್ಯ ಸಂಘಟನಾ ಆಯುಕ್ತ ಎಂ ಪ್ರಭಾಕರ್ ಭಟ್ ಅವರು ಎನ್. ಇ. ಟಿ ರೋವರ್ಸ್‌ಗಳಿಗೆ ರೋವರಿಂಗ್ ಮತ್ತು ಸಮುದಾಯ ಅಭಿವೃದ್ಢಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಮಾಹಿತಿಗಳನ್ನು ನೀಡಿದರು.
ಸಂಸ್ಥೆಯ ಪ್ರಿನ್ಸಿಪಾಲ್ ವೈ ಎನ್.ಸಾಲಿಯಾನ್, ರಘುರಾಮ್ ರಾವ್ ಉಪಸ್ಥಿತರಿದ್ದರು.
ಸುರೇಶ್ ಎಸ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರೋವರ್ ವಿದ್ಯಾರ್ಥಿ ಮಂಜುಲೇಶ್ ಕಿಣಿ ವಂದಿಸಿದರು.

Kinnigoli-26021301

Kinnigoli-26021302

Kinnigoli-26021303

Comments

comments

Leave a Reply

Read previous post:
ಕಿನ್ನಿಗೋಳಿ ಪುರುಷ ಪ್ರೇರಣಾ ಶಿಬಿರ

ಕಿನ್ನಿಗೋಳಿ: ಮಹಿಳೆಯರನ್ನು ಪುರುಷರು ಸಮಾಜದ ಮುಖ್ಯವಾಹಿನಿಗೆ ತರಲು ಸ್ಪಂದಿಸಬೇಕು ಎಂದು ದ.ಕ ಹಾಲು ಉತ್ಪಾದಕರ ಒಕ್ಕೂಟ ಉಪ ವ್ಯವಸ್ಥಾಪಕ ಡಿ.ಎಸ್.ಹೆಗ್ಡೆ ಹೇಳಿದರು. ಭಾರತ ಸರಕಾರ, ಮಹಿಳಾ ಮತ್ತು ಮಕ್ಕಳ...

Close