ಕಿನ್ನಿಗೋಳಿ ಪಂಚಾಯಿತಿ ಗ್ರಾಮ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಪಂಚಾಯಿತಿಯ ದ್ವಿತೀಯ ಹಂತದ ಗ್ರಾಮ ಸಭೆ ಬುಧವಾರ ನಡೆಯಿತು. ನೋಡೆಲ್ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ನಾರಾಯಣಾಚಾರಿ ಮಾಹಿತಿ ನೀಡುವಾಗ ಗ್ರಾಮಸ್ಥರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಗ್ರಾಮ ಸಭೆ ೧೧ ಗಂಟೆಗೆ ಆರಂಭಗೊಂಡಾಗ ಸಾಕಷ್ಟು ಸಂಖ್ಯೆಯಲ್ಲಿದ್ದ ಗ್ರಾಮಸ್ಥರು, ಗಂಟೆ ಕಳೆಯುತ್ತಿದ್ದಂತೆ ಸಭಾಭವನ ಖಾಲಿಯಾಗತೊಡಗಿತ್ತು. ರಾಜೀವಗಾಂಧಿ ಸೇವಾ ಕೇಂದ್ರ ನಿರ್ಮಾಣ ಕಾಮಾಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಹಾಗೂ ಕಳಪೆ ಕಾಮಗಾರಿಯ ಬಗ್ಗೆ ಗ್ರಾಮಸ್ಥರು ಆಕ್ಷೇಪಿಸಿದಾಗ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು. 17 ಕೋಟಿಯ ಬಹು ಗ್ರಾಮ ನೀರಿನ ಯೋಜನೆ ಕೇವಲ ಗಗನ ಕುಸುಮವಾಗದಿರಲಿ ??? ಎಂದು ಗ್ರಾಮಸ್ಥರು ಸಭೆಯಲ್ಲಿ ಪ್ರಶ್ನೆಯೆತ್ತಿ ನಂತರ ತಮ್ಮ ತಮ್ಮೊಳಗೆ ಛೇಡಿಸಿ ನಕ್ಕು ಮಾತನಾಡಿಕೊಳ್ಳುತ್ತಿದ್ದರು. ಎಳತ್ತೂರಿನ ರಫಾಯಿಕೆರೆಯ ಹೂಳನ್ನು ಎತ್ತಿ ಪಕ್ಕದಲ್ಲಿ ಹಾಕಿದ್ದರಿಂದ ಮಳೆಗಾಲದ ಸಮಯ ನೀರು ಹಾಗೂ ಮಣ್ಣು ಸಮೇತ ಕೆರೆಗೆ ಬೀಳುವ ಸಂಭವವಿದ್ದು “ಕೆರೆಯ ಮಣ್ಣು ಕೆರೆಗೆ ಚೆಲ್ಲಿ” ಎಂಬಾತಾಗಿದೆ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದರು. ಮುಲ್ಕಿ ನೆಮ್ಮದಿ ಕೇಂದ್ರ

Comments

comments

Leave a Reply

Read previous post:
ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನ ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಶ್ರೀ ಅರಸು ಕುಂಜರಾಯರ ವರ್ಷಾವಧಿ ನೇಮೋತ್ಸವ ಮಾರ್ಚ್ ೮ರಿಂದ ೧೧ರವರೆಗೆ ನಡೆಯಲಿದೆ. ಮಾ.೮ರಂದು ಶ್ರೀ ಅರಸು ಕುಂಜರಾಯ ದೈವದ ನೇಮೋತ್ಸವ, ಮಾ.೯ ಶ್ರೀ...

Close