ಕೊಲ್ಲೂರುವಿನಲ್ಲಿ ಮನೆಗೆ ಬೆಂಕಿ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಕೊಲ್ಲೂರು ಗ್ರಾಮದ ಕೊಗ್ಗಣ್ಣ ಶೇರಿಗಾರ ಅವರ ಮನೆಗೆ ಮಂಗಳವಾರ ರಾತ್ರಿ ಸುಮಾರು 11ಗಂಟೆ ಹೊತ್ತಿಗೆ ಬೆಂಕಿ ಬಿದ್ದು ಮನೆಯ ವಸ್ತುಗಳು ಸುಟ್ಟು ಭಸ್ಮವಾಗಿವೆ. ಸುಮಾರು ರೂಪಾಯಿ ಐವತ್ತು ಸಾವಿರ ನಷ್ಟ ಅಂದಾಜಿಸಲಾಗಿದೆ. ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಪಂಚಾಯಿತಿ ಸದಸ್ಯರು ಹಾಗೂ ಇಲಾಖಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ಪಂಚಾಯಿತಿ ಗ್ರಾಮ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಪಂಚಾಯಿತಿಯ ದ್ವಿತೀಯ ಹಂತದ ಗ್ರಾಮ ಸಭೆ ಬುಧವಾರ ನಡೆಯಿತು. ನೋಡೆಲ್ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ನಾರಾಯಣಾಚಾರಿ ಮಾಹಿತಿ ನೀಡುವಾಗ ಗ್ರಾಮಸ್ಥರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಗ್ರಾಮ...

Close