ಮೀನು ಸಾಗಾಟ ಲಾರಿಗೆ ಬಸ್ ಡಿಕ್ಕಿ

Prakash M Suvarna

ಮೂಲ್ಕಿ: ಮಂಗಳೂರಿನಿಂದ ಪಡುಬಿದ್ರಿ ಮಾರ್ಗವಾಗಿ ಕಳಸಕ್ಕೆ ಹೋಗುತ್ತಿದ್ದ ಎಕ್ಸ್‌ಪ್ರೆಸ್ಸ್ ಬಸ್ಸೊಂದು ಬುಧವಾರ ಸಂಜೆ ಕೊಲ್ನಾಡು ಬಳಿ ರಾಷ್ಟೀಯ ಹೆದ್ದಾರಿ ೬೬ರಲ್ಲಿ ಮೀನಿನ ಲಾರಿಗೆ ಡಿಕ್ಕಿ ಹೊಡೆದು ಲಾರಿ ಚಾಲಕ ಮಲ್ಪೆಯ ರಾಜೇಶ್(30) ತೀವ್ರ ಗಾಯಗೊಂಡಿದ್ದು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಿನಿಂದ ಬರುತ್ತಿದ್ದ ಬಸ್ ಕೊಲ್ನಾಡು ಬಳಿ ತಿರುವೊಂದರಲ್ಲಿ ಕಾರು ಸಾಗಾಟದ ಟ್ರೈಲರ್ ಒಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಈ ಘಟನೆ ಸಂಭವಿಸಿದೆ. ಮೂಲ್ಕಿಯ ಶಿಕ್ಷಣ ಸಂಸ್ಥೆಗೆ ಸೇರಿದ, 60ಕ್ಕೂ ಅಧಿಕ ಸಣ್ಣ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಬಸ್ ಎದುರಿನಿಂದ ಬರುತ್ತಿತ್ತು.
ಅತೀ ವೇಗದಲ್ಲಿ ಓವರ್‌ಟೇಕ್ ಮಾಡುತ್ತಿದ್ದ ಎಕ್ಸ್‌ಪ್ರೆಸ್ಸ್ ಬಸ್ಸಿನ ಚಾಲಕನಿಗೆ ತಕ್ಷಣ ಬ್ರೇಕ್ ಹಾಕಲು ಅಸಾಧ್ಯವಾಗಿ ಮಕ್ಕಳ ಬಸ್ಸಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿ ಅದರ ಹಿಂಬದಿಯಲ್ಲಿ ಬರುತ್ತಿದ್ದ ಮೀನಿನ ಲಾರಿಗೆ ಡಿಕ್ಕಿ ಹೊಡೆಯಿತು.
ಅಪಘಾತದ ರಭಸಕ್ಕೆ ಮೀನಿನ ಲಾರಿ ಹಾಗೂ ಬಸ್ಸಿನ ಮುಂಭಾಗ ತೀವ್ರ ಜಖಂಗೊಂಡಿದೆ. ಶಾಲಾ ಬಸ್ಸಿನ ಹಿಂಬದಿಗೆ ಬಸ್ ಒರಸಿಕೊಂಡು ಹೋದ ಕಾರಣ ಬಾಲಕಿಗೆ ಗಾಯಗಳಾಗಿದೆ. ಲಾರಿಯಲ್ಲಿ ಮಲ್ಪೆಯಿಂದ ಕೊಚ್ಚಿಗೆ ಬೆಲೆಬಾಳುವ ಸಿಗಡಿ ಮತ್ತು ಬೊಂಡಾಸ್ ಮೀನು ಸಾಗಿಸಲಾಗಿತ್ತು. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mulki-28021301

Mulki-28021302

Comments

comments

Leave a Reply

Read previous post:
ಕಟೀಲು : ಡಾ.ನಾರಾಯಣ ಶೆಟ್ಟರಿಗೆ ಸಂಮಾನ

Mithuna Kodethoor ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಂದಿನಿ ಅವತರಣ ದಿನವನ್ನು ಮಂಗಳವಾರ ಆಚರಿಸಲಾಯಿತು. ಸೀಯಾಳಾಭಿಷೇಕ, ಕ್ಷೀರಪಾಯಸ ಮಾಡಲಾಯಿತು. ಸಂಜೆ ಕಟೀಲು ಕ್ಷೇತ್ರ ಮಾಹಾತ್ಮ್ಯೆ ಯಕ್ಷಗಾನ...

Close