ಮೂಲ್ಕಿ: ನೀನೆ ಬರಿ ನೀನೆ ಚಿತ್ರೀಕರಣ

Bhagyavan Sanil
ಮೂಲ್ಕಿ: ನೀನೆ ಬರಿ ನೀನೆ ಚಲನ ಚಿತ್ರಕ್ಕಾಗಿ ಮೂಲ್ಕಿ ವಿಜಯಾ ಕಾಲೇಜಿನ ಹೊರಾಂಗಣದಲ್ಲಿ ಚಿತ್ರೀಕರಣ ನಡೆಯಿತು.
ಅಶೋಕ್ ಕಿಣಿ ನಿರ್ಮಾಪನದ ನಡೆಯುವ ಚಿತ್ರದಲ್ಲಿ ಪೋಲೀಸ್ ಕ್ವಾಟ್ರಸ್ ಚಿತ್ರzಲ್ಲಿ ನಟಿಸಿರುವ ಅನೀಶ್ ಹೀರೋ ಆಗಿದ್ದು ಚಿಂಗಾರಿ ಚಿತ್ರದಲ್ಲಿ ದರ್ಶನ್ ಜೊತೆ ನಟಿಸಿರುವ ದೀಪಿಕಾ ಕಾಮ್ಮಯ ಹಿರೋಯಿನ್ ಆಗಿದ್ದಾರೆ. ಗೆಳತಿಯಾಗಿ ಬೆಂಗಳೂರಿನ ಶಿವಾನಿ ನಟಿಸುತ್ತಿದ್ದಾರೆ. ದೀಪಕ್ ತಿಮ್ಮಯ ನಿರ್ದೇಶನದ ಈ ಚಿತ್ರಕ್ಕೆ ಜಂಯಂತ್ ಕಾಯ್ಕಿಣಿ ಸಂಭಾಷಣೆಯನ್ನು ಬರೆದಿದ್ದಾರೆ. ಮನೋಹರ ಮೂರ್ತಿಯವರ ಪದ್ಯಗಳನ್ನು ಸೋನು ನಿಗಮ್ ಮತ್ತು ಶ್ರೇಯಾ ಘೋಶಲ್ ಹಾಡಿದ್ದಾರೆ. ಅನಂತ್ ಅರಸ್ ಛಾಯಾಗ್ರಹಣದ ಈ ತಂಡವು ಬೆಂಗಳೂರು ಮತ್ತು ಸಕಲೇಶ್‌ಪುರ ಪ್ರದೇಶದಲ್ಲಿ ಚಿತ್ರೀಕರಣ ಮುಗಿಸಿ ಕಾಲೇಜು ಹೊರಾಂಗಣ ಚಿತ್ರೀಕರಣಕ್ಕಾಗಿ ಮೂಲ್ಕಿಗೆ ಆಗಮಿಸಿದೆ.
ಚಿತ್ರಕಥೆಯ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ನಿರ್ದೇಶಕ ದೀಪಕ್ ತಿಮ್ಮಯ ಇದೊಂದು ಸಂಗೀತ ಪ್ರಧಾನವಾಗಿರುವ ರೊಮ್ಯಾಂಟಿಕ್ ಚಿತ್ರವಾಗಿದ್ದು ಯುವಕನೊಬ್ಬ ಜೀವನದ ಅನುಭವಗಳಿಂದ ಸಂಗೀತವನ್ನು ಕಲಿತು ಅತೀ ದೊಡ್ಡ ಹಾಡುಗಾರನಾಗುವ ಚಿತ್ರಕಥೆ ಇದೆ. ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿ ಕೇವಲ ಕಾಲೇಜಿನ ಚಿತ್ರೀಕರಣಕ್ಕಾಗಿ ಮೂಲ್ಕಿಯನ್ನೇಕೆ ಆರಿಸಿದಿರಿ ಎಂದಾಗ ೩ವರ್ಷದ ಹಿಂದೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೂಲ್ಕಿ ವಿಜಯಾ ಕಾಲೇಜಿಗೆ ಬಂದಿರುವ ಸಂದರ್ಭ ಇಲ್ಲಿನ ಹಸಿರು ಪೃಕೃತಿ ಮನ ಸೆಳೆದಿತ್ತು ಈ ರೀತಿಯ ಪೃಕೃತಿಯಲ್ಲಿ ಇರುವ ಕಾಲೇಜು ರಾಜ್ಯದಲ್ಲೇ ಇಲ್ಲವೆಂಬುದು ನನ್ನ ಭಾವನೆಯಾಗಿದೆ ಇಲ್ಲಿನ ಪಕೃತಿ ಸೌಂದರ್ಯಕ್ಕೆ ಮನಸೋತು ಇಲ್ಲಿಗೆ ಬರಬೇಕಾಯಿತು ಎಂದರು ಕಾಲೇಜು ಹೊರಾಂಗಣ ಮತ್ತು ಕ್ಲಾಸ್ ರೂಮ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

Kinnigoli28021301

Kinnigoli28021302

Kinnigoli28021303

Comments

comments

Leave a Reply

Read previous post:
ಕೊಲ್ಲೂರುವಿನಲ್ಲಿ ಮನೆಗೆ ಬೆಂಕಿ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಕೊಲ್ಲೂರು ಗ್ರಾಮದ ಕೊಗ್ಗಣ್ಣ ಶೇರಿಗಾರ ಅವರ ಮನೆಗೆ ಮಂಗಳವಾರ ರಾತ್ರಿ ಸುಮಾರು 11ಗಂಟೆ ಹೊತ್ತಿಗೆ ಬೆಂಕಿ ಬಿದ್ದು ಮನೆಯ ವಸ್ತುಗಳು ಸುಟ್ಟು...

Close