ಕಿನ್ನಿಗೋಳಿ- ಶಿಶುಗಳ ಆರೋಗ್ಯ ಮತ್ತು ಆಹಾರ ಮಾಹಿತಿ

ಕಿನ್ನಿಗೋಳಿ: ಭಾರತ ಸರಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನವದೆಹಲಿ, ಕರ್ನಾಟಕ ಹಾಲು ಮಹಾ ಮಂಡಳಿ ಬೆಂಗಳೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಹಾಗೂ ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ ಆಶ್ರಯದಲ್ಲಿ ಶನಿವಾರ ಯುಗಪುರುಷ ಸಭಾಂಗಣದಲ್ಲಿ ಶಿಶುಗಳ ಆರೋಗ್ಯ ಮತ್ತು ಆಹಾರ ಮಾಹಿತಿ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳ ತಜ್ಞ ಡಾ| ಕೆ. ಕೃಷ್ಣ ಮಾಹಿತಿ ನೀಡಿದರು. ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ವಾಣಿ ವೈ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. sದ.ಕ.ಹಾ.ಉ.ಒಕ್ಕೂಟ ಸ್ಟೆಪ್ ವಿಭಾಗದ ಸಹಾಯಕಿ ನಳಿನಿ, ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಜಗದೀಶ ಶೆಟ್ಟಿ, ಸೌಮ್ಯ ಉಪಸ್ಥಿತರಿದ್ದರು. ಈ ಸಂದರ್ಭ ಹಾವು ಕಡಿತಕೊಳಪಟ್ಟ ದನದ ಮಾಲಕಿ ವೈಲೆಟ್ ಡಿ’ಸೋಜ ಅವರಿಗೆ ರೂ. ೭ಸಾವಿರ ಧನ ಸಹಾಯ ನೀಡಲಾಯಿತು.

Kinnigoli 02031301

Kinnigoli-02031302

Comments

comments

Leave a Reply

Read previous post:
ಎಂ.ಸುಕುಮಾರನ್- ಸನ್ಮಾನ

Bhagyavan Sanil ಮೂಲ್ಕಿ: ಮೆಸ್ಕಾಂ ಕಛೇರಿಯಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ಸುಕುಮಾರನ್ ರವರು ಸೇವೆಯಿಂದ ನಿವೃತ್ತಿಗೊಂಡ ಸಂದರ್ಭ ಮೂಲ್ಕಿ ಕಛೇರಿಯ ಸಿಬ್ಬಂದಿಗಳು ಸಪತ್ನೀಕರಾಗಿ ಅವರನ್ನು ಗುರುವಾರ...

Close