ಕೆಮ್ರ್ರಾಲ್ ಗ್ರಾಮ ಸಭೆ

ಕಿನ್ನಿಗೋಳಿ: ಫೆಬ್ರವರಿಯಲ್ಲಿ 20 ರಂದು ಭಾರತ್ ಬಂದ್‌ನಿಂದಾಗಿ ಮೂಂದೂಡಲ್ಪಟ್ಟಿದ್ದ ಕೆಮ್ರಾಲ್ ಪಂಚಾಯಿತಿಯ ದ್ವಿತೀಯ ಹಂತದ ಗ್ರಾಮ ಸಭೆ ಮಂಗಳವಾರ ನಡೆಯಿತು. ಕೆಮ್ರಾಲ್ ಪಂಚಾಯಿತಿಯ ಹಲವು ಭಾಗದಲ್ಲಿ ಸಮರ್ಪಕ ನೀರಿನ ಸಂಪರ್ಕ ಇದ್ದರೂ ಕೆಲವು ಭಾಗಗಳಲ್ಲಿ ದಿನಕ್ಕೆ ಅರ್ಧ ಗಂಟೆ ಮಾತ್ರ ನೀರು ಸರಭರಾಜಾಗುತ್ತಿದೆ ಎಂದು ಗ್ರಾಮಸ್ಥರು ದೂರಿಕೊಂಡರು. ಅಂತರ್ಜಲ ಮಟ್ಟದ ಕೊರತೆ ಗ್ರಾಮದಲ್ಲಿ ಕಾಡುತ್ತಿದ್ದು ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ತಿಳಿಸಿದರು.
ತೋಟಗಾರಿಕೆ ಇಲಾಖೆಯ ನಾರಾಯಣಾಚಾರಿ ನೋಡೆಲ್ ಅಧಿಕಾರಿಯಾಗಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೊಟ್ಯಾನ್, ಜಿಲ್ಲಾ ಪಂಚಾಯಿತಿ ಇಂಜೀನಿಯರ್ ಪ್ರಶಾಂತ್ ಆಳ್ವ, ಗ್ರಾಮ ಕರಣಿಕ ಲೋಕೇಶ್, ಮಹಿಳಾ ಕಲ್ಯಾಣ ಇಲಾಖೆಯ ಕಿಶೋರಿ, ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಬಾಸ್ಕರ್ ಕೋಟ್ಯಾನ್, ಪಶು ಸಂಗೋಪನ ಇಲಾಖೆಯ ಡಾ| ಕೆ.ಪಿ. ಪ್ರಸನ್ನ, ಜಯಂತ್ ಕುಮಾರ್, ಆಹಾರ ಇಲಾಖೆಯ ವಾಸು ಶೆಟ್ಟಿ, ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಬಾಲಕೃಷ್ಣ, ಕೆಮ್ರಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಿಚಾರ್ಡ್ ಡಿಸೋಜ, ಪ್ರಭಾರ ಪಿಡಿಒ ಗಣೇಶ್ ಉಪಸ್ಥಿತರಿದ್ದರು.

Kinnigoli-05031302

Comments

comments

Leave a Reply

Read previous post:
ಕೆಮ್ರಾಲ್ : ವೃತ್ತಿ ಕೌಶಲ್ಯ ತರಬೇತಿ

ಕಿನ್ನಿಗೋಳಿ : ದ.ಕ. ಜಿಲ್ಲಾ ಪಂಚಾಯಿತಿ ಜಿಲ್ಲಾ ಸಾಕ್ಷರತಾ ಸಮಿತಿ, ತಾಲೂಕು ಪಂಚಾಯಿತಿ ಜನ ಶಿಕ್ಷಣ ಟ್ರಸ್ಟ್ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನವಸಾಕ್ಷರರ ಒಂದು...

Close