ಕೆಮ್ರಾಲ್ : ವೃತ್ತಿ ಕೌಶಲ್ಯ ತರಬೇತಿ

ಕಿನ್ನಿಗೋಳಿ : ದ.ಕ. ಜಿಲ್ಲಾ ಪಂಚಾಯಿತಿ ಜಿಲ್ಲಾ ಸಾಕ್ಷರತಾ ಸಮಿತಿ, ತಾಲೂಕು ಪಂಚಾಯಿತಿ ಜನ ಶಿಕ್ಷಣ ಟ್ರಸ್ಟ್ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನವಸಾಕ್ಷರರ ಒಂದು ತಿಂಗಳ “ವೃತ್ತಿ ಕೌಶಲ್ಯ ತರಬೇತಿ ಶಿಬಿರ” ಕೆಮ್ರಾಲ್ ಪಂಚಾಯಿತಿ ಕಟ್ಟಡದಲ್ಲಿ ನಡೆಯಿತು. ಫಿನಾಯಿಲ್, ಸಾಬೂನು ದ್ರಾವಣ, ಪ್ಲೇಟ್ ಪೌಡರ್, ಬಟ್ಟೆ ಒಗೆಯುವ ಸಾಬೂನು ತಯಾರಿಕೆ, ಸ್ನಾನದ ಸಾಬೂನು, ಸಾಬೂನು ಪೌಡರ್, ಬಟ್ಟೆ ಚೀಲ ತಯಾರಿಕೆ ಬಗ್ಗೆ ತರಬೇತಿ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಕೆಮ್ರಾಲ್ ಗ್ರಾ. ಪಂ. ಸದಸ್ಯರಾದ ಗುಲಾಬಿ. ಡಿ. ಸುವರ್ಣ, ಪ್ರಸಾದ್ ಹರಿಪಾದೆ, ಸುಧಾಕರ, ರಾಮದಾಸ್ ಶೆಟ್ಟಿ, ಜಯರಾಮ ಮತ್ತಿತರರು ಉಪಸ್ಥಿತರಿದ್ದರು.

Kinnigoli-05031301

 

Comments

comments

Leave a Reply

Read previous post:
ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ ಹಗಲು ರಥೋತ್ಸವ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಸೋಮವಾರ ಹಗಲು ರಥೋತ್ಸವ ನಡೆಯಿತು.

Close