ಕಂಬಳಬೆಟ್ಟು : ಪೊಂಜೊವುಲೆನ ತುಡರ ಪರ್ಬ

ಕಿನ್ನಿಗೋಳಿ: ಸಮಾಜ ಮಹಿಳೆಯನ್ನು ಅಬಲೆಯೆಂದು ಬಿಂಬಿಸಬಾರದು ಯಾವತ್ತಿಗೂ ಮಹಿಳೆ ಸಬಲೆ ಎಂದು ಸಾಹಿತಿ ಅತ್ರಾಡಿ ಅಮೃತ ಶೆಟ್ಟಿ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ಲಯನ್ಸ್, ಲಯನೆಸ್, ಲಿಯೋ ಕ್ಲಬ್ ಮುಲ್ಕಿ ಹಾಗೂ ಕಂಬಳಬೆಟ್ಟು ತೋಕೂರು ಶ್ರೀ ದೇವಿ ಮಹಿಳಾ ಮಂಡಲ ಆಶ್ರಯದಲ್ಲಿ ಶನಿವಾರ ನಡೆದ ದಶಮಾನೋತ್ಸವ ಸಮಾರಂಭ ಹಾಗೂ ಪೊಂಜೊವುಲೆನ ತುಡರ ಪರ್ಬ ಕಾರ್ಯಕ್ರಮದಲ್ಲಿ “ಪೊಣ್ಣ ಬುಲೆಚ್ಚಿಲ್ದ ಕಜ್ಜ” ಬಗ್ಗೆ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು.
ಭಾರತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಾಹಿತಿ ಜಯಂತಿ ಬಂಗೇರ ಅವರನ್ನು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮನಾಥಕೋಟ್ಯಾನ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕಾಮತ್, ಮುಲ್ಕಿ ಬಂಟರ ಸಂಘ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಉದ್ಯಮಿ ರತ್ನ ಆರ್. ಕಾರ್ನಾಡು, ಶ್ರೀ ದೇವಿ ಮಹಿಳಾ ಮಂಡಲ ಸ್ಥಾಪಕ ಅಧ್ಯಕ್ಷೆ ವಿಲಾಸಿ ಆರ್. ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11031301

Comments

comments

Leave a Reply

Read previous post:
ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಸೌಲಭ್ಯ

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮೆನ್ನಬೆಟ್ಟು ಕಾರ್ಯಕ್ಷೇತ್ರ ವ್ಯಾಪ್ತಿಯ ಗುಂಡುಮುರ ಗಿರಿಜ ಆಚಾರ್ಯ ಮತ್ತು ಕಿಲೆಂಜೂರು ವಾರಿಜ ಆಚಾರ್ಯ ಅವರಿಗೆ ಮಾಸಾಶನ ಸೌಲಭ್ಯ ನೀಡಲಾಯಿತು. ಮೆನ್ನಬೆಟ್ಟು ಗ್ರಾಮ...

Close