ಕೆಮ್ರಾಲ್ :ರಾಜ್ಯ ಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಕಿನ್ನಿಗೋಳಿ: ಜಯ ಕರ್ನಾಟಕ ಘಟಕ ಕೆಮ್ರಾಲ್ ವಲಯ ಹಾಗೂ ಹೊಸಕಾಡು ಜೋಯ್ ಫ್ರೆಂಡ್ಸ್ ಜಂಟೀ ಆಶ್ರಯದೊಂದಿಗೆ ದಿ|| ರೋಹಿತ್ ಕುಮಾರ್ ಹೊಸಕಾಡು ಇವರ ಸ್ಮರಣಾರ್ಥ ರಾಜ್ಯ ಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಶನಿವಾರ ಪಕ್ಷಿಕೆರೆ ಚರ್ಚ್ ಬಳಿ ನಡೆಯಿತು.
ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಪಂದ್ಯಾಟವನ್ನು ಉದ್ಘಾಟಿಸಿದರು. ದಿ|| ರೋಹಿತ್ ಕುಮಾರ್ ಕುಟುಂಬಕ್ಕೆ ರೂ. ೫೦೦೦೦ ಹಾಗೂ ಲಿಲ್ಲಿ ಡಿಸೋಜ, ಧರ್ಮರಾಜ್ , ತಾರಾ, ಬಿಪಾತುಮ್ಮ ಹೊಸಕಾಡು, ಇಸುಬು ಅವರಿಗೆ ವೈದಕೀಯ ಚಿಕಿತ್ಸೆಗಾಗಿ ಸಂಸ್ಥೆಗಳ ವತಿಯಿಂದ ಧನ ಸಹಾಯ ನೀಡಲಾಯಿತು.
ರಮೇಶ್ ಡಿ ಶೆಟ್ಟಿ ಭಾಕಿಮಾರು ಗುತ್ತು, ರಾಜೇಂದ್ರ ಶೆಟ್ಟಿ ಕುಡ್ತಿಮಾರು ಗುತ್ತು, ಚರಣ ಶೆಟ್ಟಿ ಕೊಜಪಾಡಿ ಬಾಳಿಕೆ ಮನೆ, ಸುರೇಶ್ ಶೆಟ್ಟಿ ಯೆಯ್ಯಾಡಿ, ಮುಲ್ಕಿನಗರ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಬೊಳ್ಳೂರು ದರ್ಗಾ ಮೌಲ್ವಿ ಅಬ್ದುಲ್ ಪೈಝಿ,  ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಬಾಲಾದಿತ್ಯ ಆಳ್ವ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಉಪಾಧ್ಯಕ್ಷ ರಿಚಾರ್ಡ್ ಡಿ’ಸೋಜ, ಉದ್ಯಮಿ ಮಯ್ಯದ್ದಿ, ಗೋಪಾಲಸ್ವಾಮಿ, ಸುರೇಶ್ ಪಂಜ, ವಸಂತ್ ಬೆರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11031302

 

Comments

comments

Leave a Reply

Read previous post:
ಕಂಬಳಬೆಟ್ಟು : ಪೊಂಜೊವುಲೆನ ತುಡರ ಪರ್ಬ

ಕಿನ್ನಿಗೋಳಿ: ಸಮಾಜ ಮಹಿಳೆಯನ್ನು ಅಬಲೆಯೆಂದು ಬಿಂಬಿಸಬಾರದು ಯಾವತ್ತಿಗೂ ಮಹಿಳೆ ಸಬಲೆ ಎಂದು ಸಾಹಿತಿ ಅತ್ರಾಡಿ ಅಮೃತ ಶೆಟ್ಟಿ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ಲಯನ್ಸ್, ಲಯನೆಸ್,...

Close