ಶಿಕ್ಷಣ ಮತ್ತು ಧಾರ್ಮಿಕ ಸದ್ಬಾವನೆ ಅಗತ್ಯ : ವಾಸುದೇವ ಆಸ್ರಣ್ಣ

ಕಿನ್ನಿಗೋಳಿ: ಜನರಲ್ಲಿ ಸಂಸ್ಕಾರಯುತ ಶಿಕ್ಷಣ ಮತ್ತು ಧಾರ್ಮಿಕತೆಯ ಬಗ್ಗೆ ಸದ್ಬಾವನೆಯ ಅರಿವು ಮೂಡಿದಾಗ ಸಮಾಜ ಪ್ರಗತಿ ಹೊಂದುವುದು. ಎಂದು ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.

ಶನಿವಾರ ನಡೆದ ಕೊಡೆತ್ತೂರು ಅರಸು ಕುಂಜಿರಾಯ ನೇಮೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಿದ್ದರು. ಸಂತ ಅಲೋಶಿಯಸ್ ಕಾಲೇಜು ಉಪನ್ಯಾಸಕ ಡಾ|| ಗಣೇಶ ಅಮೀನ್ ಸಂಕಮಾರ್ “ತುಳುನಾಡಿನಲ್ಲಿ ದೈವಾರಾಧನೆ” ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.
ಕಟೀಲು ದೇವಳ ಅರ್ಚಕ ಹರಿ ನಾರಾಯಣ ಆಸ್ರಣ್ಣ, ಡಾ|| ದಯಾನಂದ ಶೆಟ್ಟಿ, ದುರ್ಗಾಂಬಾ ಕನ್ ಸ್ಟ್ರಕ್ಷನ್ ನ ಸಂತೋಷ್ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟುಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಉದ್ಯಮಿ ಗಿರೀಶ್ ಶೆಟ್ಟಿ, ಮುಂಬಯಿ ಸಮಿತಿ ಗೌರವಾಧ್ಯಕ್ಷ ನಿರಂಜನ್ ಶೆಟ್ಟಿ ಮಾಗಂದಡಿ, ಅಧ್ಯಕ್ಷ ದಿವಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಶೆಟ್ಟಿ, ಉಪನ್ಯಾಸಕ ಸೋಂದಾ ಭಾಸ್ಕರ ಭಟ್ ಉಪಸ್ಥಿತರಿದ್ದರು.
ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಲೋಕೇಶ್ ಶೆಟ್ಟಿ ವಂದಿಸಿದರು. ರಾಜೇಂದ್ರ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

Kinnigoli-11031303

Kinnigoli-11031304

Comments

comments

Leave a Reply

Read previous post:
ಕೆಮ್ರಾಲ್ :ರಾಜ್ಯ ಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಕಿನ್ನಿಗೋಳಿ: ಜಯ ಕರ್ನಾಟಕ ಘಟಕ ಕೆಮ್ರಾಲ್ ವಲಯ ಹಾಗೂ ಹೊಸಕಾಡು ಜೋಯ್ ಫ್ರೆಂಡ್ಸ್ ಜಂಟೀ ಆಶ್ರಯದೊಂದಿಗೆ ದಿ|| ರೋಹಿತ್ ಕುಮಾರ್ ಹೊಸಕಾಡು ಇವರ ಸ್ಮರಣಾರ್ಥ ರಾಜ್ಯ ಮಟ್ಟದ ಮುಕ್ತ...

Close