ಸದಾಶಿವ ರಾವ್ ಜನ್ಮ ಶತಮಾನೋತ್ಸವ ಚಾಲನೆ

ಕಿನ್ನಿಗೋಳಿ: ಕನ್ನಡ ಸಾಹಿತ್ಯದ ದಿಗ್ಗಜರೊಂದಿಗೆ ಗುರುತಿಸಿಕೊಂಡು ಕರಾವಳಿಯವರಾಗಿ ಅತೀ ಕಿರಿಯ ವಯಸ್ಸಿನಲ್ಲಿ ಜಗತ್ತಿನಿಂದ ಮರೆಯಾದ ಕವಿ ಪೇಜಾವರ ಸದಾಶಿವ ರಾವ್ ಜನ್ಮ ಶತಮಾನೋತ್ಸವದ ಪ್ರಯುಕ್ತ ಸದಾಶಿವ ರಾವ್ ಅವರ ಕಾವ್ಯ ರಚನೆಯ ಬಗ್ಗೆ ವಿದ್ಯಾರ್ಥಿ ಮತ್ತು ಯುವ ಸಾಹಿತ್ಯಾಸಕ್ತರಿಗೆ ತಿಳಿಸುವಂತ ಕೆಲಸ ಆಗಬೇಕು. ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಕವಿ ಪೇಜಾವರ ಸದಾಶಿವ ರಾವ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ಪೇಜಾವರ ಸದಾಶಿವ ರಾಯರ ಕುರಿತು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾದ್ಯಾಪಕ ಡಾ.ಎ.ವಿ.ನಾವಡ ಮಾತನಾಡಿ, 1913 ಫೆಬ್ರವರಿ 15 ರಂದು ಕಟೀಲಿನಲ್ಲಿ ಜನಿಸಿ ಮೂಲ್ಕಿ ಹಾಗೂ ಮಂಗಳೂರಿನಲ್ಲಿ ವಿದ್ಯಾಬ್ಯಾಸ ಪಡೆದು ವಾರಣಾಸಿಯಲ್ಲಿ ಇಂಜಿನಿಯರ್ ಪದವಿ, ಬಳಿಕ ಡಾಕ್ಟರೇಟ್ ಪದವಿಗಾಗಿ ಇಟೆಲಿಗೆ ತೆರಳಿ ತಮ್ಮ ಸಾಹಿತ್ಯದ ಒಡನಾಟವನ್ನು ಬಿಡದೆ ಎಳೆ ವಯಸ್ಸಿನಲ್ಲಿಯೇ ಉತ್ತಮ ಸಂಘಟಕರಾಗಿ ಸ್ವಾತಂತ್ರ್ಯ ಪೂರ್ವದ ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟ ನವ್ಯ ಕಾವ್ಯದ ಕೊಡುಗೆ ನೀಡಿದವರಲ್ಲಿ ಕವಿ ಪೇಜಾವರ ಸದಾಶಿವ ರಾವ್ ಅಗ್ರ ಪಂಕ್ತಿಯಲ್ಲಿದ್ದು, ಕವನ ಸಣ್ಣ ಕತೆಗಳ ಬರಹಗಾರರಾಗಿದ್ದ ಅವರ ಜನ್ಮ ಶತಮಾನೋತ್ಸವದ ಸಂದರ್ಭ ಯುವ ಸಾಹಿತ್ಯ ಪ್ರೇಮಿಗಳಿಗೆ ದೇಶೀಯತೆ ತುಂಬಿರುವ ಸಾಹಿತ್ಯಿಕ ಕೊಡುಗೆಗಳ ಬಗ್ಗೆ ಪರಿಚಯಿಸುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಸಲಾಗುವುದು. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವೈದ್ಯ ಡಾ. ಸಿ.ಆರ್ ಬಳ್ಳಾಲ್ ವಹಿಸಿದ್ದರು. ಸದಾಶಿವ ರಾಯರ ಬಂಧುಗಳಾದ ಶಶಿರನ್ನ ಹೆಬ್ಬಾರ್, ಕೆ.ರನ್ನ ಹೆಬ್ಬಾರ್, ಡಾ.ಶಿವ ಶರಣ ಸೋಮೇಶ್ವರ, ಪೇಜಾವರ ಪ್ರಭಾಕರ ರಾವ್, ಎಕ್ಕಾರು ಉಮೇಶ ರಾವ್ ಪೇಜಾವರ ಸದಾಶಿವ ರಾಯರ ಬಗ್ಗೆ ಮಾತನಾಡಿದರು.
ಜಯಶ್ರೀ ಭಟ್ ಪೆರ್ಲ ಸದಾಶಿವ ರಾಯರು ಬರೆದ ಆಶಯ ಗೀತೆ ಹಾಡಿದರು, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಸ್ವಾಗತಿಸಿ, ಗುರುಪ್ರಸಾದ್ ಕಟೀಲು ವಂದಿಸಿದರು. ಪತ್ರಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli12031305

Kinnigoli12031306

Comments

comments

Leave a Reply

Read previous post:
ಶ್ರೀ ಮೂಕಾಂಬಿಕಾ ದೇವಸ್ಥಾನ ಶಾಂತಿ ನಗರ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಶಾಂತಿ ನಗರ ಶ್ರೀ ಮೂಕಾಂಬಿಕಾ ದೇವಸ್ಥಾನದ 32ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ತಾ. 13 ಬುಧವಾರದಿಂದ 15ನೇ ಶುಕ್ರವಾರದ ತನಕ ನಡೆಯಲಿದೆ. ದಿನಾಂಕ...

Close