ಪಂಜ ಉಲ್ಯ ನೂತನ ರಸ್ತೆ ಶಂಕು ಸ್ಥಾಪನೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 2.8 ಕಿ.ಮೀ. ಉದ್ದದ 131.13 ಲಕ್ಷ ರೂ. ವೆಚ್ಚದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಪಂಜ-ಉಲ್ಯ ನೂತನ ರಸ್ತೆಯ ಶಂಕು ಸ್ಥಾಪನೆಯನ್ನು ಮುಲ್ಕಿ ಮೂಡಬಿದ್ರೆ ಶಾಸಕ ಕೆ ಅಭಯ ಚಂದ್ರ ಜೈನ್ ನೆರವೇರಿಸಿದರು.
ಇದೇ ಸಂದರ್ಭ ಕೊಟ್ರಪಾದೆಯಿಂದ ಮೊಗಪಾಡಿ ದೇವಸ್ಥಾನದವರೆಗೆ 10ಲಕ್ಷ ವೆಚ್ಚದ ಪರಿಶಿಷ್ಟ ಜಾತಿ ಕಾಲನಿಗೆ ಕಾಂಕ್ರೀಟು ರಸ್ತೆ, 5ಲಕ್ಷ ವೆಚ್ಚದ ಉಲ್ಯ ನಂದಿನಿ ತಡೆಗೋಡೆ ಹಾಗೂ 5 ಲಕ್ಷ ವೆಚ್ಚದ ಪಂಜ ಬೈಲಗುತ್ತು ತಡೆಗೋಡೆ ನಿರ್ಮಾಣ ಕಾಮಾಗಾರಿಗೆ ಚಾಲನೆ ನೀಡಲಾಯಿತು. ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರ್ ಜಯಾನಂದ ಪೂಜಾರಿ, ಯೋಜನಾ ಉಪವಿಭಾಗ ಸಹಾಯಕ ಇಂಜೀನಿಯರ್ ಎಮ್. ಆರ್. ಹೆಬ್ಬಾರ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಉಪಾಧ್ಯಕ್ಷ ರಿಚಾರ್ಡ್ ಡಿಸೋಜ, ಮಯ್ಯದ್ದಿ, ಸುರೇಶ್ ಪಂಜ ಮತ್ತಿತರರು ಹಾಜರಿದ್ದರು.

Kinnigoli-12031302

Comments

comments

Leave a Reply

Read previous post:
ಸದಾಶಿವ ರಾವ್ ಜನ್ಮ ಶತಮಾನೋತ್ಸವ ಚಾಲನೆ

ಕಿನ್ನಿಗೋಳಿ: ಕನ್ನಡ ಸಾಹಿತ್ಯದ ದಿಗ್ಗಜರೊಂದಿಗೆ ಗುರುತಿಸಿಕೊಂಡು ಕರಾವಳಿಯವರಾಗಿ ಅತೀ ಕಿರಿಯ ವಯಸ್ಸಿನಲ್ಲಿ ಜಗತ್ತಿನಿಂದ ಮರೆಯಾದ ಕವಿ ಪೇಜಾವರ ಸದಾಶಿವ ರಾವ್ ಜನ್ಮ ಶತಮಾನೋತ್ಸವದ ಪ್ರಯುಕ್ತ ಸದಾಶಿವ ರಾವ್ ಅವರ...

Close