ಪುನರೂರು ತಾಳಿಪಾಡಿ ಮಸೀದಿ ರಸ್ತೆ ಶಂಕು ಸ್ಥಾಪನೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 1.42 ಕಿ.ಮೀ. ಉದ್ದದ 70.49 ಲಕ್ಷ ರೂ. ವೆಚ್ಚದಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಪುನರೂರು- ತಾಳಿಪಾಡಿ ಮಸೀದಿ ರಸ್ತೆಯ ಫೆವರ್ ಫಿನಿಶ್ ಡಾಮಾರೀಕರಣದ ಶಂಕು ಸ್ಥಾಪನೆಯನ್ನು ಮುಲ್ಕಿ ಮೂಡಬಿದ್ರೆ ಶಾಸಕ ಕೆ ಅಭಯ ಚಂದ್ರ ಜೈನ್ ನೆರವೇರಿಸಿದರು.
ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರ್ ಜಯಾನಂದ ಪೂಜಾರಿ, ಯೋಜನಾ ಉಪವಿಭಾಗ ಸಹಾಯಕ ಇಂಜೀನಿಯರ್ ಎಮ್. ಆರ್. ಹೆಬ್ಬಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ಎ.ಪಿ.ಎಮ್.ಸಿ ಸದಸ್ಯ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಉಪಾಧ್ಯಕ್ಷ ಜಾನ್ಸನ್ ಡಿಸೋಜ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ರಾಘು ಶೆಟ್ಟಿ, ಶಾಲೆಟ್ ಪಿಂಟೊ, ದಿನೇಶ್ ರಾವ್, ಮಾಧವ, ಜೊಸ್ಸಿ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.

Kinnigoli-12031303

Comments

comments

Leave a Reply

Read previous post:
ಪಂಜ ಉಲ್ಯ ನೂತನ ರಸ್ತೆ ಶಂಕು ಸ್ಥಾಪನೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 2.8 ಕಿ.ಮೀ. ಉದ್ದದ 131.13 ಲಕ್ಷ ರೂ. ವೆಚ್ಚದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಪಂಜ-ಉಲ್ಯ ನೂತನ...

Close