ಉಳೆಪಾಡಿ ರಸ್ತೆ ಶಂಕು ಸ್ಥಾಪನೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 6.3 ಕಿ.ಮೀ. ಉದ್ದದ 276.88 ಲಕ್ಷ ರೂ. ವೆಚ್ಚದಲ್ಲಿ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಪಟ್ಟೆ ಕ್ರಾಸ್-ಉಳೆಪಾಡಿ-ಕೊಟ್ನಾಯಗುತ್ತು ರಸ್ತೆ ಡಾಮಾರೀಕರಣದ ಶಂಕು ಸ್ಥಾಪನೆಯನ್ನು ಸೋಮವಾರ ಮುಲ್ಕಿ ಮೂಡಬಿದ್ರೆ ಶಾಸಕ ಕೆ ಅಭಯ ಚಂದ್ರ ಜೈನ್ ನೆರವೇರಿಸಿದರು.
ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರ್ ಜಯಾನಂದ ಪೂಜಾರಿ, ಯೋಜನಾ ಉಪವಿಭಾಗ ಸಹಾಯಕ ಇಂಜೀನಿಯರ್ ಎಮ್. ಆರ್. ಹೆಬ್ಬಾರ್, ಎ.ಪಿ.ಎಮ್.ಸಿ ಸದಸ್ಯ ಪ್ರಮೋದ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ನೆಲ್ಸನ್ ಲೋಬೊ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್, ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಸೆವ್ರಿನ್ ಲೋಬೊ, ನಾರಾಯಣ ಶೆಟ್ಟಿ, ಕೃಷ್ಣ ಸಾಲ್ಯಾನ್, ವೈ. ಯೋಗೀಶ್ ರಾವ್, ಶಾಲೆಟ್ ಪಿಂಟೊ, ಸುಜಾತ, ಸುಶೀಲ, ಸುಧಾಕರ ಸಾಲ್ಯಾನ್, ಮತ್ತಿತರರು ಉಪಸ್ಥಿತರಿದ್ದರು.

Kinnigoli-12031304

Comments

comments

Leave a Reply

Read previous post:
ಪುನರೂರು ತಾಳಿಪಾಡಿ ಮಸೀದಿ ರಸ್ತೆ ಶಂಕು ಸ್ಥಾಪನೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 1.42 ಕಿ.ಮೀ. ಉದ್ದದ 70.49 ಲಕ್ಷ ರೂ. ವೆಚ್ಚದಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಪುನರೂರು-...

Close