ಕಿನ್ನಿಗೋಳಿ ಉಚಿತ ವೈದಕೀಯ ಶಿಬಿರ

ಕಿನ್ನಿಗೋಳಿ: ಆರ್ಥಿಕವಾಗಿ ಹಿಂದುಳಿದ ಜನರಿಗೆ ಬ್ಯಾಂಕ್‌ಗಳು ಉಚಿತ ವೈದಕೀಯ ಶಿಬಿರ ನಡೆಸುವುದು ಶ್ಲಾಘನೀಯ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು, ಶ್ರೀನಿವಾಸ ಆಸ್ಪತ್ರೆ ಮುಕ್ಕ, ವಿಜಯ ಬ್ಯಾಂಕ್ ಕಿನ್ನಿಗೋಳಿ ಹಾಗೂ ಯುಗಪುರುಷ ಕಿನ್ನಿಗೋಳಿ ಇವರ ಜಂಟೀ ಆಶ್ರಯದಲ್ಲಿ ಬುಧವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಉಚಿತ ವೈದಕೀಯ ಶಿಬಿರದಲ್ಲಿ ಮಾತನಾಡಿದರು
ಕಿನ್ನಿಗೋಳಿ ವಿಜಯ ಬ್ಯಾಂಕ್ ಶಾಖಾಧಿಕಾರಿ ಶಿವಪ್ರಸಾದ್, ಮುಕ್ಕ ಶ್ರೀನಿವಾಸ ಆಸ್ಪತ್ರೆ ವೈದ್ಯಾಧಿಕಾರಿ ಡಾ|| ನಿರ್ಮಲ, ಡಾ|| ಅನ್ಸಿಲ್ಲ, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ರಮೇಶ್ ಉಪಸ್ಥಿತರಿದ್ದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಅಧಿಕಾರಿ ಸದಾಶಿವ ಕಾರ್ಯಕ್ರಮ ನಿರೂಪಿಸಿದರು.

Kinnigoli-13031301

Kinnigoli-13031302

Comments

comments

Leave a Reply

Read previous post:
ಉಳೆಪಾಡಿ ರಸ್ತೆ ಶಂಕು ಸ್ಥಾಪನೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 6.3 ಕಿ.ಮೀ. ಉದ್ದದ 276.88 ಲಕ್ಷ ರೂ. ವೆಚ್ಚದಲ್ಲಿ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಪಟ್ಟೆ...

Close