ತೋಕೂರು-ಉಚಿತ ದಂತ ಚಿಕಿತ್ಸೆ ಮತ್ತು ಮಾಹಿತಿ ಶಿಬಿರ

ಕಿನ್ನಿಗೋಳಿ: ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ನಿಯಮಿತ ಆಹಾರ ಹಾಗೂ ವ್ಯಾಯಾಮವನ್ನು ರೂಢಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ರೋಟರಿ ಜಿಲ್ಲೆ 3180 ವಲಯ 3ರ ನಿಯೋಜಿತ ವಲಯ ಸೇನಾನಿ ಎನ್.ಪಿ ಶೆಟ್ಟಿ ಹೇಳಿದರು.
ಎ. ಬಿ. ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯ ದೇರಳಕಟ್ಟೆ, ರಾಷ್ಟ್ರೀಯ ಸೇವಾ ಘಟಕ ಎಂ. ಆರ್.ಪೂಂಜಾ ಐ.ಟಿ.ಐ. ತೋಕೂರು ಇದರ ಜಂಟೀ ಆಶ್ರಯದಲ್ಲಿ ಬುಧವಾರ ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯ ದೇರಳಕಟ್ಟೆ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಆಂಡ್ರ್ಯೂ ಡಿ’ಕ್ರೂಸ್ ದಂತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.
ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ವೈ.ಎನ್. ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.
ಡಾ| ರಾಹುಲ್ ರಮೇಶ್ , ವೆಂಕಟರಮಣ ಗಟ್ಟಿ, ಸಂಸ್ಥೆಯ ತರಬೇತಿ ಅಧಿಕಾರಿ ರಘುರಾಮ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಕಿರಿಯ ತರಬೇತಿ ಅಧಿಕಾರಿ ಸುರೇಶ್ ಎಸ್. ವಂದಿಸಿದರು. ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli-13031303

Kinnigoli-13031304

Kinnigoli-13031305

Comments

comments

Leave a Reply

Read previous post:
ಕಿನ್ನಿಗೋಳಿ ಉಚಿತ ವೈದಕೀಯ ಶಿಬಿರ

ಕಿನ್ನಿಗೋಳಿ: ಆರ್ಥಿಕವಾಗಿ ಹಿಂದುಳಿದ ಜನರಿಗೆ ಬ್ಯಾಂಕ್‌ಗಳು ಉಚಿತ ವೈದಕೀಯ ಶಿಬಿರ ನಡೆಸುವುದು ಶ್ಲಾಘನೀಯ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು. ವಿಜಯ ಗ್ರಾಮೀಣ ಅಭಿವೃದ್ಧಿ...

Close