ಶಾಂತಿ ಸೌಹಾರ್ಧದಿಂದ ಉತ್ತಮ ಸಮಾಜ : ಕಮಲಾದೇವಿ ಪ್ರಸಾದ ಆಸ್ರಣ್ಣ

ಕಿನ್ನಿಗೋಳಿ : ಧರ್ಮ ಜಾಗೃತಿ, ಧಾರ್ಮಿಕ ಪ್ರಜ್ಞೆ, ಶಾಂತಿ ಸೌಹಾರ್ಧದ ಪರಿಸರವಿದ್ದಾಗ ಮಾತ್ರ ಉತ್ತಮ ಸಮಾಜ ರೂಪುಗೊಳ್ಳುತ್ತದೆ ಎಂದು ಕಟೀಲು ದೇವಳ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಶಾಂತಿನಗರದಲ್ಲಿ ಬುಧವಾರ ನಡೆದ ಶ್ರೀ ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಶ್ರೀ ಮೂಕಾಂಬಿಕಾ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಾಜೋತ್ಸವ ಪ್ರಶಸ್ತಿ ವಿಜೇತ, ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ ಅವರನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಉಪಾಧ್ಯಕ್ಷ ಜಾನ್ಸನ್ ಡಿಸೋಜ ಎ. ಪಿ. ಎಮ್. ಸದಸ್ಯ ಪ್ರಮೋದ್ ಕುಮಾರ್, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಶಾಂತಿನಗರದ ಖಿಲ್‌ರಿಯಾ ಜುಮ್ಮಾ ಮಸೀದಿ ಖತೀಬರು ಪಿ.ಜೆ. ಅಹಮ್ಮದ್ ಮದನಿ, ತಾಳಿಪಾಡಿ ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷೆ ಜಲಜ ಪೂಜಾರಿ, ಗ್ರಾ.ಪಂ. ಸದಸ್ಯೆ ಸುಜಾತ, ಶಾಂತಿನಗರ ರೋಟರಿ ಗ್ರಾಮೀಣ ದಳ ಅಧ್ಯಕ್ಷ ಜಗದೀಶ್ ಆಚಾರ್, ನವ ಚೈತನ್ಯ ಫ್ರೆಂಡ್ಸ್ ಅಧ್ಯಕ್ಷ ಸಂದೇಶ್, ಗ್ರೀನ್ ಸ್ಟಾರ್ ಕ್ರಿಕೆಟರ‍್ಸ್ ಅಧ್ಯಕ್ಷ ಗುಲಾಮ್ ಹುಸೇನ್, ಶಾಂತಿನಗರ ನಾಗರಿಕಾ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಝೀರ್, ಗ್ರಾ.ಪಂ.ಸದಸ್ಯ ಗಣೇಶ್ ಸುವರ್ಣ ಚೊಟರ್ಕೆ, ಟಿ.ಎಚ್. ಮಯ್ಯದ್ದಿ, ಹಾಗೂ ಯಶೋಧ ಮತ್ತಿತರರು ಉಪಸ್ಥಿತರಿದ್ದರು.
ಧರ್ಮದರ್ಶಿ ವಿವೇಕನಂದ ಸ್ವಾಗತಿಸಿದರು, ಶಶಿಕಾಂತ್ ವಂದಿಸಿದರು, ದಿವಾಕರ್ ಮತ್ತು ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-14031302

Kinnigoli-14031303

Comments

comments

Leave a Reply

Read previous post:
ಅಜಾರು ನಿಡ್ಡೋಡಿ ರಸ್ತೆ ಗುದ್ದಲಿ ಪೂಜೆ

ಕಿನ್ನಿಗೋಳಿ : ಕರ್ನಾಟಕ ಸರಕಾರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 4.58 ಕಿ.ಮೀ. ಉದ್ದದ 167.67 ಲಕ್ಷ ರೂ. ವೆಚ್ಚದಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಅಜಾರು-ಜಲಕದ...

Close