ಕಿನ್ನಿಗೋಳಿ- ವಿಶ್ವ ಮಹಿಳಾ ಮತ್ತು ಕ್ಷಯ ರೋಗ ದಿನಾಚರಣೆ

ಕಿನ್ನಿಗೋಳಿ: ಮಹಿಳೆ ಸುವ್ಯವಸ್ಥಿತ ಕುಟುಂಬದ ತಳಹದಿ. ಮಾನವೀಯತೆಯುಳ್ಳ ಸಶಕ್ತ ಮಹಿಳೆಯಿಂದ ಸಮಾಜ ಏಳಿಗೆ ಹೊಂದುವುದು ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೊ ಹೇಳಿದರು.
ಸಂಜೀವಿನಿ ಮತ್ತು ಕನ್ಸೆಟ್ಟಾ ಆಸ್ಪತ್ರೆ ಕಿನ್ನಿಗೋಳಿ ಸಹಯೋಗದಲ್ಲಿ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ಸೆಟ್ಟಾ ಆಸ್ಪತ್ರೆ ನಿರ್ದೇಶಕಿ ಭಗಿನಿ ಡಾ| ಜೀವಿತಾ ಅಧ್ಯಕ್ಷತೆ ವಹಿಸಿದ್ದರು. ವಕೀಲೆ ಮತ್ತು ಡೀಡ್ಸ್ ಸಂಸ್ಥೆಯ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಮಹಿಳಾ ಸಾಮಾಜಿಕ ದೌರ್ಜನ್ಯದ ಬಗ್ಗೆ ಉಪನ್ಯಾಸವಿತ್ತರು, ಮೂಡಬಿದ್ರೆ ಕ್ಷಯ ರೋಗ ನಿಯಂತ್ರಣ ಕೇಂದ್ರದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು.
ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಸಿಂಡಿಕೇಟ್ ಬ್ಯಾಂಕ್ ಕಿನ್ನಿಗೋಳಿ ಶಾಖಾ ಪ್ರಬಂಧಕ ಮಂಜುನಾಥ್ ಮಲ್ಯ, ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕ ಎಮ್. ಪಿ. ಶೆಟ್ಟಿ, ಸಂಜೀವಿನಿಯ ಲಲಿತಾ ಭಾಸ್ಕರ್ ಉಪಸ್ಥಿತರಿದ್ದರು.
ಬಿಂದಿಯಾ ಸ್ವಾಗತಿಸಿ, ಸಂಜೀವಿನಿ ಸಂಚಾಲಕಿ ಭಗಿನಿ ಸಿ. ಹೋಪ್ ಪ್ರಸ್ತಾವಿಸಿದರು. ಮಾಲತಿರಾವ್ ವಂದಿಸಿದರು, ಸವಿತಾ ಹಾಗೂ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.

Kinnigoli-15031302

Kinnigoli-15031303

Comments

comments

Leave a Reply