ಕಿನ್ನಿಗೋಳಿ : ಸ್ವಸಹಾಯ ಸಂಘಗಳ ಸಹಮಿಲನ

ಕಿನ್ನಿಗೋಳಿ: ಸಿ.ಒ.ಡಿ.ಪಿ. ಮಂಗಳೂರು ಹಾಗೂ ಸೇಹ ಒಕ್ಕೂಟ ಕಿನ್ನಿಗೋಳಿ ಸಹಯೋಗದಲ್ಲಿ ಸ್ವಸಹಾಯ ಸಂಘಗಳ ಸಹಮಿಲನ ಕಾರ್ಯಕ್ರಮ ಶನಿವಾರ ಯುಗಪುರುಷದ ಸಭಾಭವನದಲ್ಲಿನಡೆಯಿತು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹಾಗೂ ವೇದಿಕೆಯಲ್ಲಿದ್ದ ಅತಿಥಿಗಳು “ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳ” ಎಂಬ ಆಡುಮಾತಿನಂತೆ ಅಕ್ಕಿಯನ್ನು ಪಾತ್ರೆಗೆ ಸುರಿದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ನೇಹಾ ಒಕ್ಕೂಟದ ಅಧ್ಯಕ್ಷೆ ಜೆಸಿಂತಾ ಡಿ’ಸೋಜ ಅವರಿಗೆ ಹಸ್ತಾಂತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದರು.
ಕಿನ್ನಿಗೋಳಿ ಇಂಡಿಯನ್ ಒವರ್‌ಸೀಸ್ ಬ್ಯಾಂಕ್ ಶಾಖಾ ಪ್ರಬಂಧಕ ಬಿ. ಕೆ. ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ ಹೆಗ್ಡೆ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಉಪಸ್ಥಿತರಿದ್ದರು. ಸ್ವಸಹಾಯ ಸಂಘಗಳಿಗೆ ವಿವಿಧ ಸ್ಪರ್ಧೆ ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು.
ಎಮಿಲ್ಡಾ ಸ್ವಾಗತಿಸಿ ರೋಕಿ ಸಲ್ಡಾನ್ಹ ಪ್ರಸ್ತಾವನೆಗೈದರು. ಪ್ರಶಾಂತ್ ಶೆಟ್ಟಿ ವಂದಿಸಿ, ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

Kinnigoli-18031301

Kinnigoli-18031302

Comments

comments

Leave a Reply

Read previous post:
ಯುವ ಜನರು ಸಂಘಟಿತರಾಗಬೇಕು : ಫಾ| ಥೋಮಸ್

ಕಿನ್ನಿಗೋಳಿ: ಯುವ ಜನರು ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದು ದಾಮಸ್ ಕಟ್ಟೆ ಎಸ್.ವಿ.ಡಿ. ಯ ಧರ್ಮಗುರು ಫಾ| ಥೋಮಸ್ ಹೇಳಿದರು. ಶುಕ್ರವಾರ ಕಿನ್ನಿಗೋಳಿಯ ಮೂರುಕಾವೇರಿಯಲ್ಲಿ ನೆಲ್ಲಿಗುಡ್ಡೆ ಗೆಳೆಯರ...

Close