ಉಚಿತ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮ

ಕಿನ್ನಿಗೋಳಿ: ಸಂಕಲಕರಿಯ ಹಾಲು ಉತ್ಪಾದಕರ ಸಹಕಾರ ಸಂಘ, ರೋಟರ‍್ಯಾಕ್ಟ್, ರೋಟರಿ, ಇನ್ನರ್ ವೀಲ್ ಕ್ಲಬ್ ಕಿನ್ನಿಗೋಳಿ , ವಿಜಯ ಯುವಕ ಸಂಘ, ಖುಷಿ ಮಹಿಳಾ ಮಂಡಲ ಸಂಕಲಕರಿಯ, ಲಯನ್ಸ್ ಕ್ಲಬ್, ಮುಂಡ್ಕೂರು ಕಡಂದಲೆ, ಭಾರ್ಗವ ಜೇಸಿಸ್ ಮುಂಡ್ಕೂರು ಇದರ ಜಂಟೀ ಸಹಭಾಗಿತ್ವದಲ್ಲಿ ಶನಿವಾರ ಸಂಕಲಕರಿಯ ಪರಿಸರದ ಜಾನುವಾರುಗಳಿಗೆ ಉಚಿತ ಕಾಲುಬಾಯಿ ರೋಗ ಲಸಿಕೆಗಳನ್ನು ನೀಡಲಾಯಿತು. ಸಂಕಲಕರಿಯ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಶರತ್ ಶೆಟ್ಟಿ ಕಾರ್ಯದರ್ಶಿ ಸುರೇಶ್ ಭಂಢಾರಿ, ನಿರ್ದೇಶಕ ಸುಧಾಕರ ಸಾಲ್ಯಾನ್, ಪಶುಚಿಕಿತ್ಸಾ ಸಹಾಯಕ ಎಳಿಂಜೆ ನಾಗೇಶ್, ರೋಟರ‍್ಯಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ರೋಟರಿ ಕಾರ್ಯದರ್ಶಿ ಯಶವಂತ ಐಕಳ, ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Kinnigoli-17031301

Comments

comments

Leave a Reply