ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಫಲಿಮಾರ್ಕರ್ ದಂಪತಿಸಹಿತ ಸನ್ಮಾನ

Bhagyavan Sanil

ಮೂಲ್ಕಿ:ಪ್ರತಿಫಲಾಪೇಕ್ಷೆ ರಹಿತ ಸೇವೆಗೆ ಭಗವಂತನಿಂದ ನಿರೀಕ್ಷೆಗೂ ಅಧಿಕ ಪ್ರತಿಫಲ ಲಭ್ಯವಾಗುತ್ತದೆ ಎಂದು ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಕಾಳ ಭ್ಯರವ ದರ್ಶನ ಪಾತ್ರಿ ವಸಂತ ನಾಯಕ್ ಫಲಿಮಾರ್ಕರ್ ಹೇಳಿದರು.
ಮೂಲ್ಕಿ ಜಿ.ಎಸ್.ಬಿ ಸಭಾಗೃಹ ಸಮಿತಿ, ಜಿಎಸ್‌ಬಿ ಸಭಾ ಹಾಗೂ ಬಡ ವಿದ್ಯಾರ್ಥಿ ಫಂಡ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಏಕಾಗ್ರತೆಯಿಂದ ಮಾಡುವ ಯಾವುದೇ ಕಾರ್ಯವು ಫಲಪ್ರಧವಾಗುವುದು ಮಾತ್ರವಲ್ಲದೆ ಉತ್ತಮ ಪ್ರತಿಫಲಲಭ್ಯವಾಗುವುದು ಆದರೆ ಪೂರ್ವ ನಿರೀಕ್ಷೆಯಿಂದ ಮಾಡಿದ ಕೆಲಸದಲ್ಲಿ ಏಕಾಗ್ರತೆಯ ಕೊರತೆಯಾಗುವ ಸಂಭವ ಅಧಿಕ ಎಂದರು.
ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದರ್ಶವ ಪಾತ್ರಿಯಾಗಿ 25 ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಫಲಿಮಾರ್ಕರ್ರನ್ನು ಸನ್ಮಾನಿಸಲಾಯಿತು.
ಸಭಾಗೃಹ ಸಮಿತಿಯ ಅಧ್ಯಕ್ಷ ವಿ.ವಿಶ್ವನಾಥ ಕಾಮತ್, ಸಭಾ ಅಧ್ಯಕ್ಷ ಜನಾರ್ದನ ಭಟ್, ಕೆ.ಸತೀಶ್ ಭಂಡಾರಿ, ಕೆ.ನರಸಿಂಹ ಪೈ, ವಿದ್ಯಾರ್ಥಿ ಫಂಡ್‌ಅಧ್ಯಕ್ಷ ಎಂ. ವಾಸುದೇವ ಆರ್.ಕುಡ್ವಾ, ಸತ್ಯೇಂದ್ರ ಶೆಣೈ, ಸುಮಾ.ವಿ.ಫಲಿಮಾರ್ಕರ್, ವಾರಿಜಾ.ವಿ.ಕಾಮತ್, ಪ್ರಫುಲ್ಲಾ.ಜೆ.ಭಟ್, ಪದ್ಮಾ.ವಿ.ಕುಡ್ವಾ ಉಪಸ್ಥಿತರಿದ್ದರು.
ಪ್ರೊ.ನಾಗೇಶ್ ಶೆಣೈ ಸ್ವಾಗತಿಸಿದರು, ರಾಜೇಶ್ ಪ್ರಭು ನಿರೂಪಿಸಿದರು, ಎಂ.ಸತ್ಯೇಂದ್ರ ಶೆಣೈ ವಂದಿಸಿದರು.

Kinnigoli--21031302

Comments

comments

Leave a Reply

Read previous post:
ಮಾನಂಪಾಡಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ

Bhagyavan Sanil ಮೂಲ್ಕಿ: ಮಾನಂಪಾಡಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ವಾರ್ಷಿಕ ಉತ್ಸವ ಪ್ರಯುಕ್ತ ಶ್ರೀ ಮಾರಿ ಅಮ್ಮನವರ ಬೊಂಬೆಯನ್ನು ಕಾರ್ನಾಡು ಜಂಕ್ಷನ್‌ಕಟ್ಟೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.  

Close