ಕಟೀಲು ಪ್ರಥಮ ದರ್ಜೆ ಕಾಲೇಜು 25ನೇ ವಾರ್ಷಿಕೋತ್ಸವ

ಕಿನ್ನಿಗೋಳಿ : ಸಂಸ್ಕಾರದಿಂದ ಸಂಸ್ಕೃತಿ, ಸಂಸ್ಕೃತಿಯಿಂದ ನೆಮ್ಮದಿ ಸಿಗುತ್ತದೆ. ವಸ್ತು ನಿಷ್ಠ ಸದಭಿರುಚಿಯ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಲ್ಕಿ ವಿಜಯ ಕಾಲೇಜು ಪ್ರಾಂಶುಪಾಲ ಪ್ರೊ| ಶಂಕರ್ ಹೇಳಿದರು.
ಕಟೀಲು ದುರ್ಗಾ ಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ 25ನೇ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳ ಆಡಳಿತಾಧಿಕಾರಿ ಡಾ| ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಿ.ಎಚ್.ಡಿ. ಪದವಿ ಪಡೆದ ಹಿಂದಿ ಉಪನ್ಯಾಸಕಿ ಡಾ| ಸುನೀತಾ ಎಚ್. ಬಿ ಹಾಗೂ ವಾಣಿಜ್ಯ ಉಪನ್ಯಾಸಕಿ ಭವ್ಯ, ವಿಶ್ವವಿದ್ಯಾನಿಲಯ ಟೇಬಲ್ ಟೆನಿಸ್ ತಂಡಕ್ಕೆ ಆಯ್ಕೆಯಾದ ದಿವ್ಯ ಹಾಗೂ ಪವಿತ್ರ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ವಿಜಯ ವಿ. ವಿದ್ಯಾರ್ಥಿ ಸಂಘ ಅಧ್ಯಕ್ಷ ಶಮಿತ್, ಉಪಾಧ್ಯಕ್ಷ ಸುಶಿಲ್ ಕುಮಾರ್, ಕಾರ್ಯದರ್ಶಿ ರವೀಂದ್ರ, ಜೊತೆ ಕಾರ್ಯದರ್ಶಿ ಪ್ರಿಯಾಂಕ ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲ ಎಮ್. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಕಾಲೇಜು ವರದಿ ವಾಚಿಸಿದರು, ಉಪನ್ಯಾಸಕ ಪರಮೇಶ್ವರ ಸಿ.ಎಸ್. ವಂದಿಸಿದರು, ಉಪನ್ಯಾಸಕ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-22031302

Kinnigoli-22031303

Kinnigoli-22031304

 

Comments

comments

Leave a Reply

Read previous post:
ಕಿನ್ನಿಗೋಳಿ : ತುಳು ಸಿನಿಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್, ಯುಗಪುರುಷ, ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಮುಲ್ಕಿ ಯುವವಾಹಿನಿ ಸಹಭಾಗಿತ್ವದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬುಧವಾರ ನಡೆದ ತುಳು ಸಿನಿಮೋತ್ಸವ ಕಾರ್ಯಕ್ರಮದಲ್ಲಿ...

Close