ಐಕಳ – ಪ್ರೊ| ಪ್ಯಾಟ್ರಿಕ್ ಮಿನೇಜಸ್ ಸನ್ಮಾನ

ಕಿನ್ನಿಗೋಳಿ: ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹಾಗೂ ತರ್ಕಶಾಸ್ತ್ರದ ಮನೋಭಾವ ಬೆಳೆಸುವವರೇ ಉತ್ತಮ ಶಿಕ್ಷಕರಾಗಬಲ್ಲರು. ದೇಶದ ಆಭಿವೃದ್ಧಿಗೆ ಶಿಕ್ಷಣವೇ ಮೂಲ ಕಾರಣ ಎಂದು ಮಂಗಳೂರು ಕೆಥೋಲಿಕ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಫಾ| ವಿಲ್ಸನ್ ಎಲ್. ವಿ. ಡಿ’ಸೋಜ ಹೇಳಿದರು.
ದಾಮಸ್ ಕಟ್ಟೆ ಕಿರೆಂ ಚರ್ಚ್ ಸಭಾಭವನದಲ್ಲಿ ಶನಿವಾರ ನಡೆದ ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಪ್ರೊ| ಪ್ಯಾಟ್ರಿಕ್ ಮಿನೇಜಸ್ ಅವರ ನಿವೃತ್ತಿ ಹಾಗೂ ಬೀಳ್ಕೊಡುಗೆ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೊಂಪೈ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ. ಪೌಲ್ ಪಿಂಟೋ, ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಶರತ್ ಶೆಟ್ಟಿ, ವಿಧ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಥೋಮಸ್ ಜಿ. ಎಮ್. ಉಪಸ್ಥಿತರಿದ್ದರು.
ಶಿಕ್ಷಕ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಮೈಖಲ್ ಪಿಂಟೊ ಸ್ವಾಗತಿಸಿದರು, ಸುಕೇತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಹೆರಾಲ್ಡ್ ಡಿಸೋಜ ವಂದಿಸಿದರು,

Kinnigoli-23031303

Comments

comments

Leave a Reply

Read previous post:
ತೋಕೂರು : ಸೌರ ಶಕ್ತಿ ಬಳಕೆ ಕಾರ್ಯಾಗಾರ

ಕಿನ್ನಿಗೋಳಿ: ವಿದ್ಯುತ್ ಶಕ್ತಿಗೆ ಪರ್ಯಾಯವಾಗಿ ಸೌರಶಕ್ತಿಯ ಉಪಯೋಗವನ್ನು ಅರಿತು ಸೌರಶಕ್ತಿಯಿಂದ ನಡೆಯುವ ಉಪಕರಣಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಬೇಕೆಂದು ಎಂದು ತೋಕೂರು ರಾಮಕೃಷ್ಣ ಪೂಂಜಾ ಐ.ಟಿ.ಐ. ಪ್ರಾಂಶುಪಾಲ...

Close