ತೋಕೂರು : ಸೌರ ಶಕ್ತಿ ಬಳಕೆ ಕಾರ್ಯಾಗಾರ

ಕಿನ್ನಿಗೋಳಿ: ವಿದ್ಯುತ್ ಶಕ್ತಿಗೆ ಪರ್ಯಾಯವಾಗಿ ಸೌರಶಕ್ತಿಯ ಉಪಯೋಗವನ್ನು ಅರಿತು ಸೌರಶಕ್ತಿಯಿಂದ ನಡೆಯುವ ಉಪಕರಣಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಬೇಕೆಂದು ಎಂದು ತೋಕೂರು ರಾಮಕೃಷ್ಣ ಪೂಂಜಾ ಐ.ಟಿ.ಐ. ಪ್ರಾಂಶುಪಾಲ ವೈ.ಎನ್. ಸಾಲ್ಯಾನ್ ಹೇಳಿದರು.
ತೋಕೂರು ರಾಮಕೃಷ್ಣ ಪೂಂಜಾ ಐ.ಟಿ.ಐ.ನ ಎನ್.ಎಸ್. ಎಸ್, ಘಟಕ, ಎನ್.ಇ.ಟಿ ರೋವರ್ಸ್ ಮತ್ತು ಎನ್.ಆರ್.ಎ.ಎಮ್ ಪಾಲಿಟೆಕ್ನಿಕ್ ನಿಟ್ಟೆ ವತಿಯಿಂದ ಶುಕ್ರವಾರ ನಡೆದ ಸೌರ ಶಕ್ತಿಯ ಬಳಕೆ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒರ್ಬ್ ಸೋಲಾರ್ ಎನರ್ಜಿ ಸಂಸ್ಥೆಯ ದೀಪಕ್ ಕಾಮತ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ನಿಟ್ಟೆ ರುಕ್ಮಿಣಿ ಅಡ್ಯಂತಾಯ ಪಾಲಿಟೆಕ್ನಿಕ್ ಪ್ರಾಂಶುಪಾಲ ಪ್ರಶಾಂತ್ ಕುಮಾರ್, ನಿಟ್ಟೆ ಸಮುದಾಯ ಪಾಲಿಟೆಕ್ನಿಕ್ ಆಡಳಿತಾಧಿಕಾರಿ ರಘುಪತಿ, ಉಪನ್ಯಾಸಕ ವೆಂಕಟರಮಣ ಪ್ರಸಾದ್, ತರಬೇತಿ ಆಧಿಕಾರಿ ರಘುರಾಮ್ ರಾವ್, ಸಂದರ್ಭೋಚಿತವಾಗಿ ಮಾತನಾಡಿದರು.
ಹರಿ ಹೆಚ್. ವಂದಿಸಿ ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli-23031302

Comments

comments

Leave a Reply

Read previous post:
ಕಿನ್ನಿಗೋಳಿ : ತುಳು ಸಿನಿಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್, ಯುಗಪುರುಷ, ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಮುಲ್ಕಿ ಯುವವಾಹಿನಿ ಸಹಭಾಗಿತ್ವದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶುಕ್ರವಾರ ನಡೆದ ತುಳು ಸಿನಿಮೋತ್ಸವ ಕಾರ್ಯಕ್ರಮದಲ್ಲಿ...

Close