ಮೂಲ್ಕಿ ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವ ವರ್ಷ

Bhagyavan Sanil

ಮೂಲ್ಕಿ: ದೇಶದ ಉನ್ನತಿಗೆ ಪೂರಕವಾದ ಪ್ರಜೆಗಳ ಸೃಷ್ಠಿ ಉತ್ತಮ ವಿದ್ಯಾ ಸಂಸ್ಥೆಗಳಿಂದ ಮಾತ್ರ ಸಾದ್ಯವಾಗಲಿದ್ದು ಮೂಲ್ಕಿ ಪರಿಸರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಗುಣಮಟ್ಟದ ವಿದ್ಯಾರ್ಥಿಗಳನ್ನು ಕಳೆದ ಹತ್ತು ವರ್ಷದಲ್ಲಿ ಸಮಾಜದ ಅಭ್ಯುದಯಕ್ಕಾಗಿ ನೀಡಿದ ಕೀರ್ತಿ ಸೈಂಟ್ ಆನ್ಸ್ ಸಂಸ್ಥೆಗೆ ಸಲ್ಲುತ್ತದೆ ಎಂದು ನಿಟ್ಟೆ ಯುನಿವರ್ಸಿಟಿಯ ಉಪಕುಲಪತಿಗಳಾದ ಡಾ.ಎಸ್ ರಮಾನಂದ ಶೆಟ್ಟಿಯವರು ಹೇಳಿದರು.
ಶನಿವಾರ ಮೂಲ್ಕಿ ಸೈಂಟ್ ಆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವ ವರ್ಷ ಉದ್ಘಾಟನೆ ಮತ್ತು ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಪದವಿ ವಿತರಿಸಿ ಮಾತನಾಡಿದರು.
ಬೆಳ್ತಂಗಡಿ ಧರ್ಮ ಪ್ರಾಂಥ್ಯದ ಬಿಷಪ್ ಬಹುಮಾನ್ಯ ಲಾರೆನ್ಸ್ ಮುಕ್ರಿ ಆಶೀರ್ವಚನ ನೀಡಿ, ಬೇಡುವ ಕೈಗಳಿಗಿಂತ ಸಹಕರಿಸುವ ಕೈಗಳು ಅತೀ ಶ್ರೇಷ್ಠ ಎಂದು ತಿಳಿದುಕೊಂಡು ಸಮಾಜದ ದೀನರ ಒಳಿತಿಗೆ ಸಹಕರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ನರ್ಸಿಂಗ್ ವೃತ್ತಿಯು ಅತೀಶ್ರೇಷ್ಠ ವೃತ್ತಿಗಳಲ್ಲಿ ಒಂದಾಗಿದೆ ಎಂದು ತಿಳಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಂಟ್ ಆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎರಿಕ್ ಸಿ.ಲೋಬೊ ವಹಿಸಿದ್ದರು.
ಸಿಸ್ಟರ್ ಆಫ್ ಚಾರಿಟೀಸ್ ಸುಪೀರಿಯರ್ ಸಿ. ಮೆಟಿಲ್ಡಾ ಮೊಂತೇರೋ, ಶ್ರೀನಿವಾಸ್ ವೈದ್ಯಕೀಯ ಕಾಲೇಜು ಡೀನ್ ಬಿ.ಎನ್.ನಂದೀಶ್,ರಾಜೀವ ಗಾಂಧಿ ಯುನಿವರ್ಸಿಟಿ ಬೆಂಗಳೂರು ಇದರ ಸೆನೆಟ್ ಮೆಂಬರ್ ರಾಜೇಶ್ ಶೆಣೈ,ಮಾಜಿ ಪ್ರಾಂಶುಪಾಲೆ ಸಿ.ಲೂಸಿ ರೋಡ್ರಿಗಸ್,ನರ್ಸಿಂಗ್ ಕಾಲೇಜು ನಿರ್ದೇಶಕರಾದ ರೆ.ಸಿ. ಪ್ಲೋರಾ ಡಿಸೋಜಾ,ಪ್ರಾಂಶುಪಾಲೆ ಪ್ರೊ. ಮಾರಿಯಾ ಪಿಂಟೋ,ನರ್ಸಿಂಗ್ ಸ್ಕೂಲ್ ಪ್ರಾಂಶುಪಾಲರಾದ ಎಡ್ವಿನ್ ಡಿಕೋಸ್ಟಾ,ಪಾರಾಮೆಡಿಕಲ್ಸ್ ಮುಖ್ಯಸ್ಥೆ ಪ್ರೊ.ಲತಾಮಣಿ ಉಪಸ್ಥಿತರಿದ್ದರು.
ಸಿಪ್ಲೋರಾ ಡಿಸೋಜಾ ಸ್ವಾಗತಿಸಿದರು.ಜೋನ್ಸನ್ ಮತ್ತು ಜೇನೆಟ್ ಮೇರಿ ನಿರೂಪಿಸಿದರು.ಮಾರಿಯಾ ಜ್ಯೂಲಿಯೆಟ್ ವಂದಿಸಿದರು.

Mulki-24031301

Comments

comments

Leave a Reply

Read previous post:
ಕಿನ್ನಿಗೋಳಿ : ತುಳು ಸಿನಿಮೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್, ಯುಗಪುರುಷ, ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಮುಲ್ಕಿ ಯುವವಾಹಿನಿ ಸಹಭಾಗಿತ್ವದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಶನಿವಾರ ನಡೆದ ತುಳು ಸಿನಿಮೋತ್ಸವ...

Close