ಕೆ.ಐ.ಸಿ.ಟಿ ಮತ್ತು ಎಂ.ಸಿ.ಟಿ.ಸಿ ವಾರ್ಷಿಕೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಕೆ.ಐ.ಸಿ.ಟಿ ಹಾಗೂ ಎಂ.ಸಿ.ಟಿ.ಸಿ. ತಾಂತ್ರಿಕ ಮತ್ತು ಕಂಪ್ಯೂಟರ್ ಶಿಕ್ಷಣ ಕೇಂದ್ರದ ವಾರ್ಷಿಕೋತ್ಸವ ಶನಿವಾರ ಕಿನ್ನಿಗೋಳಿ ನೇಕಾರ ಸೌಧ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭ ಮರ್ ಹೂಮ್ ಮುಲ್ಕಿ ಎಂ. ಎಚ್. ಅಬ್ಬಾಸ್ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್ ನ್ನು ಕಿನ್ನಿಗೋಳಿ ಮುಹಿಯ್ಯುದ್ದೀನ್ ಜುಮಾ ಮಸೀದಿ ಖತೀಬರು ಟಿ.ಎಂ.ಅಬ್ದುಲ್ ಲತೀಫ್ ಸಖಾಫಿ ಉದ್ಘಾಟಿಸಿದರು. ಕಿನ್ನಿಗೋಳಿ ಕೆ.ಐ.ಸಿ.ಟಿ ಮತ್ತು ಎಂ.ಸಿ.ಟಿ.ಸಿ ನಿರ್ದೇಶಕ ಹರ್ಷದ್. ಎಂ.ಎ., ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಕೆ.ಐ.ಸಿ.ಟಿ ಹಾಗೂ ಎಂ.ಸಿ.ಟಿ.ಸಿ. ಪ್ರಾಂಶುಪಾಲ ನವೀನ್ ವೈ, ಕಿಟ್ಟ ಕರ್ಕೇರಾ ಉಪಸ್ಥಿತರಿದ್ದರು.

Kinnigoli-24031301

Comments

comments

Leave a Reply

Read previous post:
ಐಕಳ – ಪ್ರೊ| ಪ್ಯಾಟ್ರಿಕ್ ಮಿನೇಜಸ್ ಸನ್ಮಾನ

ಕಿನ್ನಿಗೋಳಿ: ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹಾಗೂ ತರ್ಕಶಾಸ್ತ್ರದ ಮನೋಭಾವ ಬೆಳೆಸುವವರೇ ಉತ್ತಮ ಶಿಕ್ಷಕರಾಗಬಲ್ಲರು. ದೇಶದ ಆಭಿವೃದ್ಧಿಗೆ ಶಿಕ್ಷಣವೇ ಮೂಲ ಕಾರಣ ಎಂದು ಮಂಗಳೂರು ಕೆಥೋಲಿಕ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ...

Close