ಕಿನ್ನಿಗೋಳಿ : ತುಳು ಸಿನಿಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್, ಯುಗಪುರುಷ, ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಮುಲ್ಕಿ ಯುವವಾಹಿನಿ ಆಶ್ರಯದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಭಾನುವಾರ ನಡೆದ ತುಳು ಸಿನಿಮೋತ್ಸವ ಸಮಾರೋಪ ಸಮಾರಂಭದಲ್ಲಿ ಕೋಟಿ ಚೆನ್ನಯ ಚಲನಚಿತ್ರದಲ್ಲಿ ನಟಿಸಿದ ಮುಲ್ಕಿ ನಗರ ಪಂಚಾಯಿತಿ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಯುಗಪುರುಷದ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ರೋಟರಾಕ್ಟ್ ಜಲ್ಲಾ ಪ್ರತಿನಿಧಿ ಶೈಲೇಂದ್ರ ರಾವ್, ಮಾಜಿ ಜಿಲ್ಲಾ ಪ್ರತಿನಿಧಿ ಸುಮೀತ್ ಕುಮಾರ್, ವಲಯ ಪ್ರತಿನಿಧಿ ರಜಾಕ್ ಕಬಾಕರ‍್ಸ್, ಉದ್ಯಮಿ ಜಯರಾಮ ಶೆಟ್ಟಿ ಸಾಲೆತ್ತೂರು, ಶೆಟ್ಟಿ, ಉದ್ಯಮಿ ಪಿ. ಸತೀಶ್ ರಾವ್, ಮೂಲ್ಕಿ ಯುವವಾಹಿನಿ ಅಧ್ಯಕ್ಷ ರಾಮಚಂದ್ರ ಕೋಟ್ಯಾನ್, ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ ಉಪಸ್ಥಿತರಿದ್ದರು.

Kinnigoli-25031304

Comments

comments

Leave a Reply

Read previous post:
ನಾಟಕದ ಶುಭ ಮುಹೂರ್ತ

ಕಿನ್ನಿಗೋಳಿ: ಕಿನ್ನಿಗೋಳಿ ವಿಜಯಾ ಕಲಾವಿದರ "ನನ ಪಾಂಡು ಪಾತೆರುಜೆ..!" ನಾಟಕದ ಶುಭ ಮುಹೂರ್ತ ಬಾನುವಾರ ಕಿನ್ನಿಗೋಳಿ ಯುಗಪುರುಷ ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ...

Close