ರೋಟರಿ ತರಬೇತಿ ಕಾರ್ಯಾಗಾರ

ಕಿನ್ನಿಗೋಳಿ: ರೋಟರಿ ಜಿಲ್ಲೆ 3180 ವಲಯ 3 ರ 2013-14ನೇ ಸಾಲಿನ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ತರಬೇತಿ ಕಾರ್ಯಾಗಾರ ಭಾನುವಾರ ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಕಿನ್ನಿಗೋಳಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಸುರೇಂದ್ರನಾಥ ವಿ. ಶೆಣೈ ಕಾರ್ಯಾಗಾರ ಉದ್ಘಾಟಿಸಿದರು. ರೋಟರಿ ಸದಸತ್ವ ಅಭಿವೃದ್ಧಿ ಜಿಲ್ಲಾ ಚಯರ್‌ಮ್ಯಾನ್ ಬಿ. ಎಮ್. ಭಟ್, ಪ್ಯೂಚರ್ ವಿಷನ್ ಚೆಯರ್‌ಮ್ಯಾನ್ ಡಾ| ಸೂರ್ಯನಾರಾಯಣ ಕೆ. ರೋಟರಾಕ್ಟ್ ಜಿಲ್ಲಾ ಸಭಾಪತಿ ಜಯರಾಮ ಕೋಟ್ಯಾನ್ ಹಾಗೂ ಮಾಜಿ ಅಸಿಸ್ಟೆಂಟ್ ಗವರ್ನರ್ ಪುಂಡಲೀಕ ಮರಾಠೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ರೋಟರಿ ವಲಯ 3 ರ ಸಹಾಯಕ ಗವರ್ನರ್ ಪಿ. ಮನೋಹರ್ ರಾವ್, ನಿಯೋಜಿತ ಸಹಾಯಕ ಗವರ್ನರ್ ಮಾಧವ ಸುವರ್ಣ ಉಪಸ್ಥಿತರಿದ್ದರು. ವಲಯ 3 ರ ಮಾಜಿ ವಲಯ ಸೇನಾನಿ ಹೆರಿಕ್ ಪಾಯಸ್ ಕಾರ್ಯಕ್ರಮ ನಿರ್ವಹಿಸಿದರು.

Kinnigoli-25031301

Kinnigoli-25031302

Comments

comments

Leave a Reply

Read previous post:
ಮೂಲ್ಕಿ ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವ ವರ್ಷ

Bhagyavan Sanil ಮೂಲ್ಕಿ: ದೇಶದ ಉನ್ನತಿಗೆ ಪೂರಕವಾದ ಪ್ರಜೆಗಳ ಸೃಷ್ಠಿ ಉತ್ತಮ ವಿದ್ಯಾ ಸಂಸ್ಥೆಗಳಿಂದ ಮಾತ್ರ ಸಾದ್ಯವಾಗಲಿದ್ದು ಮೂಲ್ಕಿ ಪರಿಸರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ...

Close