ಕೆಮ್ರಾಲ್ ಶ್ರೀ ಅರಸು ಕುಂಜರಾಯ ದೈವಸ್ಥಾನ ವರ್ಷಾವಧಿ ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು- ಕೆಮ್ರಾಲ್- ಕಿಲೆಂಜೂರು ಶ್ರೀ ಅರಸು ಕುಂಜರಾಯರ ವರ್ಷಾವಧಿ ನೇಮೋತ್ಸವ ಮಾರ್ಚ್ 28ರಿಂದ 31ರ ವರೆಗೆ ನಡೆಯಲಿದೆ. ಮಾ.28ರಂದು ಧ್ವಜಾರೋಹಣ ರಾತ್ರಿ ಶ್ರೀ ಅರಸು ಕುಂಜರಾಯ ದೈವದ ನೇಮೋತ್ಸವ, ಮಾ.29 ಶ್ರೀ ಉಳ್ಳಾಯ ದೈವ, ಶ್ರೀ ಕೊಡಮಣಿತ್ತಾಯ ದೈವ, ಶ್ರೀ ಜಾರಂದಾಯ – ಬಂಟ ದೈವಗಳ ನೇಮೋತ್ಸವ, ಮಾ.30 ಶ್ರೀ ಕಾಂತೇರಿ ಧೂಮಾವತಿ – ಬಂಟ ದೈವ ಹಾಗೂ ಶ್ರೀ ಸರಳ ಧೂಮಾವತಿ- ಬಂಟ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Leave a Reply

Read previous post:
ಕಿನ್ನಿಗೋಳಿ ವಲಯ ಕಾಂಗ್ರೆಸ್ ಪದಾಧಿಕಾರಿ ಅಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ವಲಯ ಕಾಂಗ್ರೇಸ್ ಸಮಿತಿ ಸಭೆ ಭಾನುವಾರ ಕಿನ್ನಿಗೋಳಿ ರಾಜಾಂಗಣದಲ್ಲಿ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಾಜಿ ಬ್ಲಾಕ್ ಕಾಂಗ್ರೇಸ್...

Close