ಮೂಲ್ಕಿ : ಜೆಡಿಎಸ್ ಸಭೆ

Bhagyavan Sanil

ಮೂಲ್ಕಿ : ನಿಡ್ಡೋಡಿ ಪರಿಸರದಲ್ಲಿ ಸ್ಥಾಪನೆಯಾಗಲಿರುವ ಪರಿಸರ ನಾಶಕಉಷ್ಣ ವಿದ್ಯುತ್ ಸ್ಥಾವರ ಯೋಜನೆಯು ಕಾಂಗ್ರೆಸ್ – ಬಿಜೆಪಿಯ ಅನೈತಿಕ ಮೈತ್ರಿಯ ಫಲ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಕೆ. ಅಮರನಾಥ ಶೆಟ್ಟಿ ಹೇಳಿದರು.
ಆದಿಧನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರದ ಶಾಸಕರು ಮತ್ತು ಸಂಸದರ ಲಿಖಿತ ಒಪ್ಪಿಗೆ ಇಲ್ಲದೆ ಇಂತಹ ಬೃಹತ್ ಯೋಜನೆ ಜಾರಿಯಾಗಲು ಎಂದಿಗೂ ಸಾಧ್ಯವಿಲ್ಲ ಎಂದ ಶೆಟ್ಟಿಯವರು “ಪಕ್ಷ ಕಾರ್ಯಕರ್ತರು ಮನೆಮನೆಗೆ ತೆರಳಿ ಕಾಂಗ್ರೆಸ್ ಮತ್ತು ಬಿಜೆಪಿ ಯ ಕರಾಳ ಮುಖದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕೆಂದರು. ಶಾಸಕನಾಗಿ ಮಂತ್ರಿಯಾಗಿ ನನ್ನ ಸ್ವ ಕ್ಷೇತ್ರವಾದ ಮೂಲ್ಕಿ ಹಾಗೂ ಮೂಡಬಿದರೆಗೆ ಎಲ್ಲೂ ತಾರತಮ್ಯ ಮಾಡಿಲ್ಲ ಸಬ್‌ಟ್ರೆಜರಿ, ಐಟಿಐ, ನಾಡಕಛೇರಿ, ಉಪ್ಪು ನೀರಿ ತಡೆ ಆಣೆಕಟ್ಟು ಸಹಿತ ಎಲ್ಲಾ ಸವಲತ್ತುಗಳನ್ನು ಸಮಾನ ರೀತಿಯಲ್ಲಿ ನೀಡಿದ್ದೆ ಆದರೆ ಇಂದು ತಾರತಮ್ಯ ಹೆಚ್ಚಾಗಿದೆ ಸಾಧನೆ ಶೂನ್ಯ ವಾಗಿದೆ. ಇದೀಗ ತರಾತುರಿಯಲ್ಲಿ ನಡೆಸುತ್ತಿರುವ ಗುದ್ದಲಿಪೂಜೆಗಳನ್ನು 5 ವರ್ಷಗಳ ಹಿಂದೆಯೇ ನಡೆಸಿದ್ದರೆ ಕ್ಷೇತ್ರ ಅದ್ಭುತ ಪ್ರಗತಿ ಹೊಂದುತ್ತಿತ್ತು ಎಂದರು.
ಪಕ್ಷ ಪ್ರಮುಖರಾದ ಕರುಣಾಕರ ಶೆಟ್ಟಿ , ಇಕ್ಬಾಲ್‌ಅಹ್ಮದ್ ಕಾರ್ನಾಡ್, ಹರೀಶ್ ಪುತ್ರನ್, ಆಲ್ವಿನ್ ಪಿರೇರ, ಮುಂಬೈ ಉದ್ಯಮಿ ಫೆಲಿಕ್ಸ್ ಡಿಸೋಜ, ಸಾಹುಲ್ ಹಮೀದ್, ಮುಸ್ತಾಫ, ಫೆಡ್ರಿಕ್ ಪಿಂಟೋ, ದಿವಾಕರ ಶೆಟ್ಟಿ, ವಿಮಲಾ, ನವೀನ್ ಮತ್ತಿತರರು ವೇದಿಕೆಯಲ್ಲಿದ್ದರು.

Kinnigoli-3031305

Comments

comments

Leave a Reply

Read previous post:
ಮೂಲ್ಕಿ: ನವದುರ್ಗಾ ಯುವಕ ವೃಂದದ ದ್ವಿತೀಯ ವಾರ್ಷಿಕೋತ್ಸವ

Bhagyavan Sanil ಮೂಲ್ಕಿ: ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಹಾಗೂ ಧಾರ್ಮಿಕ ಚಿಂತನೆಗಳನ್ನು ಬಡವ ಬಲ್ಲಿದನೆಂಬ ತಾರತಮ್ಯ ರಹಿತವಾಗಿ ಜನರಿಗೆ ನೀಡುತ್ತಾ ಪ್ರದೇಶದ ಜನ ಜೀವನವನ್ನು ಉನ್ನತೀಕರಣ...

Close