ಮೂಲ್ಕಿ: ನವದುರ್ಗಾ ಯುವಕ ವೃಂದದ ದ್ವಿತೀಯ ವಾರ್ಷಿಕೋತ್ಸವ

Bhagyavan Sanil
ಮೂಲ್ಕಿ: ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಹಾಗೂ ಧಾರ್ಮಿಕ ಚಿಂತನೆಗಳನ್ನು ಬಡವ ಬಲ್ಲಿದನೆಂಬ ತಾರತಮ್ಯ ರಹಿತವಾಗಿ ಜನರಿಗೆ ನೀಡುತ್ತಾ ಪ್ರದೇಶದ ಜನ ಜೀವನವನ್ನು ಉನ್ನತೀಕರಣ ಗೊಳಿಸುವ ವ್ಯಕ್ತಿಗಳು ಪ್ರಾಥಃ ಸ್ಮರಣೀಯರು ಎಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ.ಸಿ.ಸುವರ್ಣ ಹೇಳಿದರು.
ಶುಕ್ರವಾರ ರಾತ್ರಿ ಕೋಟೆಕೇರಿ ನವದುರ್ಗಾ ಯುವಕ ವೃಂದದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ವೇ.ಮೂ.ವಾದಿರಾಜ ಉಪಾದ್ಯಾಯರನ್ನು ಸಪತ್ನೀಕರಾಗಿ ಸನ್ಮಾನಿಸಿ ಮಾತನಾಡಿದರು.
ತಮ್ಮ ಧಾರ್ಮಿಕ ಪ್ರಜ್ಞೆಯನ್ನು ಸಮಾಜದ ಉತ್ತಮ ಕಾರ್ಯಗಳಿಗೆ ವಿನಿಯೋಗಿಸುತ್ತಿರುವ ಉಪಾದ್ಯಾಯರನ್ನು ಸನ್ಮಾನಿಸಿರುವುದುಇತರರಿಗೆ ಮಾದರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ನಪಂ.ಅಧ್ಯಕ್ಷ ಶಶಿಕಾಂತ ಶೆಟ್ಟಿ ವಹಿಸಿದ್ದರು.ಯುವಕ ವೃಂದದ ದ್ವಿತೀಯ ವರ್ಷದ ಸೇವಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ನಡೆಸಿದರು.
ಅತಿಥಿಗಳಾಗಿ ಉದ್ಯಮಿ ಮನೋಜ್ ಕುಮಾರ್,ಪ್ರೇಮ್.ಬಿ,ಕುಶಲ ಪೂಜಾರಿ,ಗೌರವಾಧ್ಯಕ್ಷ ಚಂದ್ರಹಾಸ ಸಾಲ್ಯಾನ್,ಅಧ್ಯಕ್ಷ ಸತೀಶ್ ಅಂಚನ್,ಉಪಾಧ್ಯಕ್ಷ ಜಯ.ಸಿ.ಪೂಜಾರಿ ಮತ್ತು ರಂಗ ಕೋಟ್ಯಾನ್, ಗೌ.ಕಾರ್ಯದರ್ಶಿ ಸದಾನಂದ ಅಂಚನ್ ಉಪಸ್ಥಿತರಿದ್ದರು.

Kinnigoli-3031304

Comments

comments

Leave a Reply

Read previous post:
ಕಿನ್ನಿಗೋಳಿ : ಕೃತಿ ಬಿಡುಗಡೆ

ಕಿನ್ನಿಗೋಳಿ: ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಯುಗಪುರುಷದ 491 ನೇ ಕೃತಿ ಸಾಹಿತಿ ಸದಾನಂದ ಹೆಗಡೆಕಟ್ಟೆ ರಚಿತ "ನಗೆಯಾಡಿ ನಿರೋಗಿಯಾಗಿ" ಕೃತಿಯನ್ನು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಶುಕ್ರವಾರ...

Close