ಪಂಜಿನಡ್ಕ-ಯಕ್ಷಗುರುವಂದನೆ ಮತ್ತು ಯಕ್ಷಗಾನ ಬಯಲಾಟ

Bhagyavan Sanil

ಮೂಲ್ಕಿ: ಯಕ್ಷ ಮಿತ್ರರು ಪಂಜಿನಡ್ಕ ಇವರಿಂದ ಯಕ್ಷಗುರುವಂದನೆ ಕಾರ್ಯಕ್ರಮ ಮತ್ತು ಯಕ್ಷಗಾನ ಬಯಲಾಟವು ಎ:13 ನೇ ಶನಿವಾರ ಸಂಜೆ 7ಕ್ಕೆ ಪಂಜಿನಡ್ಕ ಶಾಲಾ ವಠಾರದಲ್ಲಿ ನಡೆಯಲಿರುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾರದ.ವಿ.ಪೂಜಾರಿ, ಆಶೀರ್ವಚನವನ್ನು ಪದ್ಮಶ್ರೀ ಕೊಲಾಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ನಡೆಸಲಿದ್ದಾರೆ. ಯಕ್ಷಗುರುವಂದನೆಯನ್ನು ಕೆ.ಪಿ.ಎಸ್.ಕೆ. ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ವನಂತ್ ಕುಮಾರ್ ನಡೆಸಲಿದ್ದು ಯಕ್ಷಮಿತ್ರ ಪಂಜಿನಡ್ಕ ರವರನ್ನು ಗೌರವಿಸಲಾಗುವುದು. ಅಭಿನಂದನ ಭಾಷಣವನ್ನು ಪ್ರಾಥಮಿಕ ಶಾಲೆ ಪಂಜಿನಡ್ಕ ನಿವೃತ್ತ ಮುಖ್ಯ ಶಿಕ್ಷಕರು ಶಿಮಂತೂರು ಶಂಕರ್ ಮಾಸ್ಟರ್ ನಡೆಸಲಿದ್ದಾರೆ. ಅತಿಥಿಗಳಾಗಿ ಕಕ್ವಗುತ್ತು ಅಶಿಸ್ ಶೆಟ್ಟಿ, ಮುಂಬಯಿ ಕುರುಬಿಂಲ್ ಉದ್ಯಮಿ ಹರೀಶ್ ಶೆಟ್ಟಿ, ಇನ್‌ಪೋಸಿಸ್ ಇನ್‌ಫ್ರಾಸ್ಟ್ರಕ್ಟರ್ ಮಂಗಳೂರು ವಿಭಾಗ ಸೀನಿಯರ್ ಮೇನೇಜರ್ ಹರೀಶ್ .ಜೆ.ಕೊಲಕಾಡಿ, ಗೋಪಿನಾಥ್ ಪಡಂಗ, ಉದ್ಯಮಿ ಶ್ರೀನಾಥ್, ಪಂಜಿನಡ್ಕ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರಾದ ಅಚ್ಚುತ.ಜಿ, ಹಳೆ ವಿದ್ಯಾರ್ಥಿ ಸಂಘ ಪಂಜಿನಡ್ಕ ಅಧ್ಯಕ್ಷರಾದ ಬರ್ಕೆತೋಟ ಗಂಗಾಧರ್ ಶೆಟ್ಟಿ, ಉಪಸ್ಥಿತರಿರುವರೆಂದು ಪ್ರಕಟಣೆ ತಿಳಿಸಿದೆ.

Comments

comments

Leave a Reply

Read previous post:
ಕೆರೆಕಾಡು : ವೈದಕೀಯ ಶಿಬಿರ

Raghunath Kamath ಕಿನ್ನಿಗೋಳಿ: ಕಾನ್ಸೆಟ್ಟಾ ಆಸ್ಪತ್ರೆ ಕಿನ್ನಿಗೋಳಿ, ಸಿಪ್ಲಾ ಫಾರ್ಮಸ್ಯೂಟಿಕಲ್ಸ್, ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಆರೋಗ್ಯ ಸೇವಾ ಪ್ರತಿಷ್ಠಾನ ಕೆರೆಕಾಡು, ಧರ್ಮಸ್ಥಳ...

Close