ಕೆಮ್ಮಡೆ ನೇಮೋತ್ಸವ : ಧಾರ್ಮಿಕ ಸಮಾರಂಭ

ಸದುದ್ದೇಶ ಧಾರ್ಮಿಕ ಸಂಸ್ಕಾರ ಆಚರಣೆಗಳು ಜೀವನದಲ್ಲಿ ನೆಮ್ಮದಿ ಶಾಂತಿ ತರಬಲ್ಲದು ಎಂದು ಕಟೀಲು ದೇವಳ ಅರ್ಚಕ ಕಟೀಲು ದೇವಳ ಅರ್ಚಕ ಹರಿನಾರಾಯಣ ಆಸ್ರಣ್ಣ ಹೇಳಿದರು.
ಶನಿವಾರ ನಡೆದ ಮೂರುಕಾವೇರಿ ಕೆಮ್ಮಡೆ ಶ್ರೀ ವೈದ್ಯನಾಥ (ಕೋರ‍್ದಬ್ಬು) ದೈವಸ್ಥಾನ ವಾರ್ಷಿಕ ನೇಮೋತ್ಸವ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನಗೈದು ಮಾತನಾಡಿದರು. ಈ ಸಂದರ್ಭ ದೈವಸ್ಥಾನದ ಏಳಿಗೆಗಾಗಿ ಶ್ರಮಿಸಿದ ಸಂಜೀವ ಮಡಿವಾಳ, ನವೀನ್ ಕುಮಾರ್ ಮಾರಡ್ಕ, ಶಕಿಲಾ ಶೆಟ್ಟಿ ಹಾಗೂ ಬೇಬಿ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಅಮರನಾಥ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರೆ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ದಿನೇಶ್ ಆಚಾರ್ಯ, ಗಿರಿಯಪ್ಪ, ಅನಂತಪದ್ಮನಾಭ, ತಾರನಾಥ ಶೆಟ್ಟಿ, ಅಶೋಕ್, ಶ್ರೀ ವೈದ್ಯನಾಥ ಮಹಿಳಾ ಮಂಡಲ ಅಧ್ಯಕ್ಷೆ ಗುಲಾಬಿ ಉಪಸ್ಥಿತರಿದ್ದರು.
ಕೆ.ಬಿ. ಸುರೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ವೈದ್ಯನಾಥ ದೈವಸ್ಥಾನ ಆಡಳಿತ ಮೊಕ್ತೇಸರ ಜಗದೀಶ್ ಶೆಟ್ಟಿ ವಂದಿಸಿದರು.

Kinnigoli-31031301

Kinnigoli-31031302

Comments

comments

Leave a Reply

Read previous post:
ಶ್ರೀ ಅರಸು ಕುಂಜರಾಯ ನೇಮೋತ್ಸವ

ಕಿನ್ನಿಗೋಳಿ ಸಮೀಪದ ಅತ್ತೂರು- ಕೆಮ್ರಾಲ್- ಕಿಲೆಂಜೂರು ಶ್ರೀ ಅರಸು ಕುಂಜರಾಯರ ವರ್ಷಾವಧಿ ನೇಮೋತ್ಸವ ಶುಕ್ರವಾರ ನಡೆಯಿತು.

Close