ಶಿಮಂತೂರು- ಬೇಸಗೆ ಶಿಬಿರ

Vishwanath Rao

ಮೂಲ್ಕಿ: ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ ಬೇಸಗೆ ಶಿಬಿರವು ಎಪ್ರಿಲ್ 8 ರಿಂದ ಮೇ 20ರ ವರೆಗೆ ಪ್ರತೀದಿನ ಅಪರಾಹ್ನ 3ರಿಂದ 7ರ ವರೆಗೆ ಜರುಗಲಿದೆ. ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರದ ಅರಿವು ಸಂಗೀತ, ಚಿತ್ರಕಲೆ, ಗ್ರಾಮೀಣ ಕ್ರೀಡೆ, ಯಕ್ಷಗಾನ, ಯೋಗ, ಧ್ಯಾನ, ಭಾಷಣ ಕಲೆ, ಭಾಷಾ ಬೆಳವಣಿಗೆಗೆ, ಸಮಾಜಿಕ ಮತ್ತು ವೈಯಕ್ತಿಕ ಬೆಳವಣಿಗೆ ತರಬೇತಿ, ಮೈಂಡ್ ಗೇಮ್, ಮಕ್ಕಳ ಚಿತ್ರಗಳ ವೀಕ್ಷಣೆ ಸಹಿತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಎ.೭ ಭಾನುವಾರ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನು ಎಂ.ಆರ್.ಎಚ್. ಪೂಂಜಾ ಚಾರಿಟೇಬಲ್ ಟ್ರಸ್ಟ್ ನ ಪದ್ಮಾವತಿ ಪೂಂಜಾ ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಲಿದ್ದಾರೆ. ವಿದ್ವಾನ್ ರಾಮಚಂದ್ರ ಭಟ್, ಸರ್ವೋತ್ತಮ ಅಂಚನ್, ನರಸಿಂಹ ಭಾಗವತ್ ಭಾಗವಹಿಸಲಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು ಪೋ. 0824-2294745 ಸಂಪರ್ಕಿಸಿ.

Comments

comments

Leave a Reply

Read previous post:
ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ – ಕ್ರೀಡಾಕೂಟ

ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಉಲ್ಲಂಜೆ ದ.ಕ. ಹಿ. ಪ್ರಾ. ಶಾಲೆಯಲ್ಲಿ ಸ್ವಜಾತಿ ಸಮಾಜ ಭಾಂದವರಿಗಾಗಿ ಕ್ರೀಡಾಕೂಟ ನಡೆಯಿತು. ಉದ್ಯಮಿ ಪ್ರಥ್ವಿರಾಜ್ ಆಚಾರ್ಯ ಕ್ರೀಡಾಕೂಟ...

Close