ಹೊಂಬೆಳಕು ಹಸ್ತ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹೆಣ್ಣುಮಕ್ಕಳ ಕನ್ನಡ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳಿಗೆ ವಿದಾಯ ಕೂಟ ಮಂಗಳವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಏಳನೇ ತರಗತಿ ವಿದ್ಯಾರ್ಥಿನಿಯರು ರಚಿಸಿದ ಲೇಖನ, ಕವನ, ಕಥೆ, ವ್ಯಂಗ್ಯ ಚಿತ್ರ ಹಾಗೂ ಇನ್ನಿತರ ಸಾಧನೆಗಳನ್ನು ಒಳಗೊಂಡ “ಹೊಂಬೆಳಕು” ಹಸ್ತ ಪತ್ರಿಕೆಯನ್ನು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಗ್ರೇಸಿ ಬಿಡುಗಡೆಗೊಳಿಸಿದರು.
ಶಾಲಾ ಶಿಕ್ಷಕ ಅಬ್ದುಲ್ ರೆಹಮಾನ್, ಶಾಲಾ ನಾಯಕಿ ಮತ್ತು ಹೊಂಬೆಳಕು ಸಂಪಾದಕಿ ಸ್ನೇಹಾ ಮಯೋಲ್ ನೊರೊನ್ಹಾ, ಶಾಲಾ ಉಪನಾಯಕಿ ರೆನಿಶಾ ಹಾಗೂ ಶಾಲಾ ಮಂತ್ರಿ ಮಂಡಲದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Kinnigoli-02041302

Comments

comments

Leave a Reply

Read previous post:
ಸ್ನೇಹಾ ಮಯೋಲ್ ನೊರೊನ್ಹಾ ದ್ವಿತಿಯ ಸ್ಥಾನ

ಕಿನ್ನಿಗೋಳಿ: ಮಂಗಳೂರು ಬೆಥನಿ ಸೇವಾ ಕೇಂದ್ರ ನಡೆಸಿದ ರಾಜ್ಯ ಮಟ್ಟದ ಕಲಿಕಾ ಸಾಮಾರ್ಥ್ಯ ಸ್ಪರ್ಧೆಯಲ್ಲಿ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಕನ್ನಡ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ...

Close