ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ.

Raghunath Kamath
ಕಿನ್ನಿಗೋಳಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯದ2013-14ನೇ ಸಾಲಿನ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಯೋಜನೆಯಡಿಯಲ್ಲಿ 2492ಕುಟುಂಬಗಳ 8348 ಸದಸ್ಯರಿಗೆ ಸುಮಾರು ರೂಪಾಯಿ 31,72,240ಪ್ರೀಮಿಯಂ ನೋಂದಾವಣೆ ಮಾಡಲಾಗಿದೆ. ಕಿನ್ನಿಗೋಳಿ ಜನಜಾಗೃತಿ ವೇದಿಕೆಯ ಅಧ್ಯಕ್ಷ ವೈ. ಯೋಗೀಶ್ ರಾವ್ ಹಾಗೂ ಮಾಜಿ ಅಧ್ಯಕ್ಷ ಭುವನಾಭಿರಾಮ ಉಡುಪ ನೋಂದಾವಣೆ ಪತ್ರಗಳನ್ನು ಗುರುವಾರ ಸಾಂಕೇತಿಕವಾಗಿ ಕಿನ್ನಿಗೋಳಿ ವಲಯ ಕಚೇರಿಯಲ್ಲಿ ಸದಸ್ಯರಿಗೆ ವಿತರಿಸಿದರು. ಧ.ಗ್ರಾ.ಯೋ. ಕಿನ್ನಿಗೋಳಿ ವಲಯ ಮೇಲ್ವಿಚಾರಕಿ ಲತಾ ಅಮೀನ್, ಸೇವಾ ನಿರತ ದೇವೇಂದ್ರ, ಒಕ್ಕೂಟ ಅಧ್ಯಕ್ಷೆ ಯಶೋದಾ, ಸೇವಾ ಪ್ರತಿನಿಧಿಗಳಾದ ಉಷಾ ಜೆ. ಬಬಿತಾ ಸುವರ್ಣ, ಸುನೀತಾ ಶೆಟ್ಟಿ, ಶ್ರೀಕಲಾ, ಶಿಲ್ಪಾ, ವಿದ್ಯಾ ಮತ್ತಿರರು ಉಪಸ್ಥಿತರಿದ್ದರು.

Mulki-05041301

Comments

comments

Leave a Reply

Read previous post:
ಲಾರಿ ಡಿಕ್ಕಿ ಹೊಡೆದು ಪೊಲೀಸ್ ಪೇದೆ ದಾರುಣ ಸಾವು

Narendra Kerekadu ಮೂಲ್ಕಿ; ರಾಷ್ಟ್ರೀಯ ಹೆದ್ದಾರಿ 66 ಮೂಲ್ಕಿ ಬಳಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಅಪಘಾತವೊಂದರಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ....

Close