ಗಿಡಿಗೆರೆ – ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಶ್ರೀ ದುರ್ಗಾಂಬಿಕ ಯುವಕ ಯುವತಿ ಮಂಡಲ ಹಾಗೂ ಶ್ರೀ ದೇವಿ ಪ್ರಸಾದಿತಾ ಭಜನಾ ಮಂಡಳಿ ಗಿಡಿಗೆರೆ ಕಟೀಲು ಯುವಕ ಮಂಡಲದ ೩೫ನೇ ವರ್ಷಾಚರಣೆಯ ಪ್ರಯುಕ್ತ ೫೦ನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮವು ಭಾನುವಾರ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನದ ವಠಾರದಲ್ಲಿ ನಡೆಯಿತು. ಕಟೀಲು, ಕಿನ್ನಿಗೋಳಿ, ಹಳೆಯಂಗಡಿ, ಸೂರಿಂಜೆ, ಕಾಟಿಪಳ್ಳ ಹಾಗೂ ಮುಲ್ಕಿ ಪರಿಸರದ ಭಜನಾ ತಂಡಗಳು ಭಾಗವಹಿಸಿದ್ದವು. ಗೌರವ ಮಾರ್ಗದರ್ಶಕ ಸಿದ್ದ ಮೇಸ್ತ್ರಿ, ದೈವಸ್ಥಾನ ಗಿಡಿಗೆರೆ ಗುರಿಕಾರ ತಿಮ್ಮಪ್ಪ ಮೇಸ್ತ್ರೀ, ಗೌರವಾಧ್ಯಕ್ಷ ನಾರಾಯಣ ಮುಗೇರ, ಭಜನಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪಿ, ಉಪಾಧ್ಯಕ್ಷ ಹೊನ್ನಯ್ಯ, ಕಾರ್ಯದರ್ಶಿ ಮನೋಜ್, ಕೋಶಾಧಿಕಾರಿ ಗೋಪಾಲ ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-07041308

 

Comments

comments

Leave a Reply

Read previous post:
ಕಿನ್ನಿಗೋಳಿ “ಆರಾಧಾನಾಚೆಂ ಚಾಪೆಲ್” ಉದ್ಘಾಟನೆ

Raghunath Kamath ಕಿನ್ನಿಗೋಳಿ: ಕಿನ್ನಿಗೋಳಿ ಕೋಸೆಸಾಂವ್ ಅಮ್ಮನವರ ಇಗರ್ಜಿ ವಠಾರದಲ್ಲಿ ನಿರ್ಮಾಣಗೊಂಡ "ಆರಾಧಾನಾಚೆಂ ಚಾಪೆಲ್" ನ್ನು ಇತ್ತೀಚಿಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಎಲೋಶಿಯಸ್ ಪಾವ್ಲ್ ಡಿ’ಸೋಜ...

Close